alex Certify
ಕನ್ನಡ ದುನಿಯಾ       Mobile App
       

Kannada Duniya

ನಾಡಹಬ್ಬದ ಆಚರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭರದ ಸಿದ್ದತೆ

ಶಿವಮೊಗ್ಗ: ನಾಡ ಹಬ್ಬ ದಸರಾಕ್ಕೆ ಜಿಲ್ಲೆಯಾದ್ಯಂತ ಭರದಿಂದ ಸಿದ್ದತೆಗಳು ನಡೆಯುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿದೆ.

ನಗರದ ಪ್ರಮುಖ ವೃತ್ತಗಳು, ಮಾರುಕಟ್ಟೆಯಲ್ಲಿ ಚೆಂಡು ಹೂ, ಬೂದಗುಂಬಳ ಮಾರಾಟ ಬಲು ಜೋರಾಗಿದೆ. ಆಯುಧ ಪೂಜೆಗೆ ಚೆಂಡು ಹೂ ಹಾಗೂ ಬೂದ ಗುಂಬಳವನ್ನು ಪ್ರತಿಯೊಬ್ಬರೂ ಖರೀದಿಸುವುದರಿಂದ ಬೆಲೆ ಕೂಡ ತುಸು ಏರಿಕೆಯಾಗಿದೆ.

ಚೆಂಡು ಹೂ ಕೆಜಿಗೆ 40 ರಿಂದ 50 ರೂ., ಸೇಬು 100 ರೂ., ಮೂಸಂಬಿ 40 ರೂ., ಸೀತಾಫಲ 60 ರೂ., ದ್ರಾಕ್ಷಿ 80 ರೂ., ಸಪೋಟ 40 ರೂ., ದಾಳಿಂಬೆ 100 ರೂ., ಸೇವಂತಿಗೆ ಮಾರಿಗೆ 50 ರಿಂದ 60 ರೂ., ಮಲ್ಲಿಗೆ ಮಾರಿಗೆ 80 ರೂ., ಬೂದಗುಂಬಳ ಒಂದಕ್ಕೆ 50 ರೂ. ನಿಂದ 100 ರ ವರೆಗೂ ಮಾರಾಟವಾಗುತ್ತಿದೆ.

ಆಯುಧ ಪೂಜೆ ಸಡಗರ ಈಗಾಗಲೇ ಕಂಡು ಬಂದಿದ್ದು, ಜನರು ತಮ್ಮ ವಾಹನಗಳನ್ನು ಸ್ವಚ್ಚಗೊಳಿಸಲು ತಯಾರಾಗಿದ್ದಾರೆ. ವ್ಯಾಪಾರಸ್ಥರು ಅಂಗಡಿ, ಮಳಿಗೆಗಳನ್ನು ಸ್ವಚ್ಚ ಮಾಡುತ್ತಿದ್ದಾರೆ. ಗುರುವಾರದಂದು ಆಯುಧ ಪೂಜೆ ಹಾಗೂ ಶುಕ್ರವಾರ ವಿಜಯದಶಮಿ ಇದೆ. ಸಾಲು ಸಾಲು ರಜೆ ಇರುವುದರಿಂದ ವಿವಿಧ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ತಮ್ಮ ಊರುಗಳಿಗೆ ಆಗಮಿಸತೊಡಗಿದ್ದಾರೆ.

ಒಂದು ವಾರದಿಂದ ನಗರದ ಎಲ್ಲ ದೇವಾಲಯಗಳಲ್ಲಿ ನವರಾತ್ರಿ ವೈಭವ ನಡೆಯುತ್ತಿದೆ. 9 ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಪ್ತಶತಿಪರಾಯಣ, ಲಲಿತಾಷ್ಟೋತ್ತರ, ಕುಂಕುಮಾರ್ಚನೆ, ವಿಶೇಷ ಪುಷ್ಪ ಅಲಂಕಾರಗಳು, ವಿವಿಧ ಹೋಮಗಳು, ಸುಗಮ ಸಂಗೀತ, ಹೂವಿನ ಪೂಜೆ, ವಿವಿಧ ದೇವಿಯ ಪ್ರತಿಷ್ಠಾನಗಳು ಹೀಗೆ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.

ಬೆಲೆ ಏರಿಕೆ ನಡುವೆಯೂ ಹಬ್ಬದ ಸಡಗರಕ್ಕೇನು ಕೊರತೆಯಾಗಿಲ್ಲ. ಮೈಸೂರಿನ ದಸರಾ ಬಿಟ್ಟರೆ ಶಿವಮೊಗ್ಗದಲ್ಲಿಯೇ ದಸರಾ ಹಬ್ಬ ಇಡೀ ನಾಡಿನ ಗಮನ ಸೆಳೆಯುತ್ತಿತ್ತು. ಆದರೆ ಈ ಬಾರಿಯ ಉಪ ಚುನಾವಣೆ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...