alex Certify
ಕನ್ನಡ ದುನಿಯಾ       Mobile App
       

Kannada Duniya

ಧ್ರುವ ಸರ್ಜಾ ‘ಭರ್ಜರಿ’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಧ್ವನಿ

darshan

ಧ್ರುವ ಸರ್ಜಾ ಅವರ ‘ಭರ್ಜರಿ’ ಚಿತ್ರ ನಾವು ನಿತ್ಯದ ಬದುಕಿನಲ್ಲಿ ಎದುರಿಸೋ ಸವಾಲುಗಳನ್ನು ಅನಾವರಣ ಮಾಡಲಿದೆ. ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಬೆಸ್ಟ್ ಅಂತಾ ನಿರ್ಧರಿಸಿದ ಚಿತ್ರತಂಡ ಅವರದ್ದೇ ವಾಯ್ಸ್ ಓವರ್ ಪಡೆದುಕೊಳ್ತಿದೆ.

ಇದೇ ಮೊದಲ ಬಾರಿಗೆ ದರ್ಶನ್, ಸಿನೆಮಾವೊಂದಕ್ಕೆ ಧ್ವನಿ ನೀಡಿದ್ದಾರೆ. ಈ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನವಿದೆ. ಈ ಚಿತ್ರ ದರ್ಶನ್ ಧ್ವನಿಯೊಂದಿಗೆ ಆರಂಭವಾಗಲಿದೆ. ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ದರ್ಶನ್ ಧ್ವನಿ ಮೂಡಿ ಬರಲಿದೆ.

ಚಿತ್ರದ ಕಥೆ ಕೇಳಿದ ದರ್ಶನ್, ವಾಯ್ಸ್ ಓವರ್ ನೀಡಲು ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ. 2 ವರ್ಷಗಳ ಹಿಂದೆಯೇ ಈ ಸಿನೆಮಾಕ್ಕೆ ದರ್ಶನ್ ಧ್ವನಿಯೇ ಸೂಕ್ತ ಅಂತಾ ಧ್ರುವ ಸರ್ಜಾ ಕೂಡ ನಿರ್ಧರಿಸಿದ್ದರಂತೆ. ಆದ್ರೆ ಅವರನ್ನು ಕೇಳಲು ಸ್ವಲ್ಪ ಹಿಂಜರಿದಿದ್ರು.

ಯಾಕಂದ್ರೆ ಈವರೆಗೂ ದರ್ಶನ್ ಬೇರೆಯವರ ಸಿನೆಮಾಕ್ಕೆ ಧ್ವನಿ ನೀಡಿಲ್ಲ. ಆದ್ರೂ ‘ಭರ್ಜರಿ’ ಸಿನೆಮಾಕ್ಕೆ ಧ್ವನಿ ನೀಡಲು ಸಂತೋಷದಿಂದ ಒಪ್ಪಿಕೊಂಡು ಪ್ರೋತ್ಸಾಹಿಸಿದ್ದಾರೆ ಅಂತಾ ಧ್ರುವ ಹೇಳಿದ್ದಾರೆ. ಸಿನೆಮಾದ ಚಿತ್ರೀಕರಣ ಕೂಡ ಭರದಿಂದ ಸಾಗ್ತಿದೆ. ಇನ್ನೊಂದು ಹಾಡಿನ ಶೂಟಿಂಗ್ ಬಾಕಿ ಇದೆಯಂತೆ. ಮುಂದಿನ ತಿಂಗಳು ‘ಭರ್ಜರಿ’ ಚಿತ್ರ ತೆರೆಗೆ ಬರಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...