alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಯಲ್ಲಿದ್ದ ದರ್ಶನ್ ಫೋಟೋ ತೆಗೆದವನ ಮೊಬೈಲ್ ಪುಡಿ ಪುಡಿ…?

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಮುಂಜಾನೆ ಮೈಸೂರಿನ ಹಿನಕಲ್ ಬಳಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ದರ್ಶನ್, ಹಿರಿಯ ನಟ ದೇವರಾಜ್, ಅವರ ಪುತ್ರ ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಅವರ ಸ್ನೇಹಿತ  ಆಂಟನಿ ರಾಯ್ ಗಾಯಗೊಂಡಿದ್ದರು.

ಅಪಘಾತಕ್ಕೀಡಾದ ಕಾರನ್ನು ಕೂಡಲೇ ಸ್ಥಳದಿಂದ ತೆರವು ಮಾಡಲಾಗಿತ್ತಲ್ಲದೆ ಗಾಯಾಳುಗಳನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಎರಡು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆನ್ನಲಾಗಿದೆ.

ಅಪಘಾತದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಆತಂಕಗೊಂಡ ದರ್ಶನ್ ಅಭಿಮಾನಿಗಳು, ತಮ್ಮ ನೆಚ್ಚಿನ ನಟನನ್ನು ನೋಡಲು ಮುಂದಾಗಿದ್ದರು. ಹೀಗಾಗಿ ವಾಟ್ಸಾಪ್ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಾವು ಅಪಾಯದಿಂದ ಪಾರಾಗಿದ್ದು ಇನ್ನೆರಡು ದಿನಗಳಲ್ಲಿ ಅಭಿಮಾನಿಗಳ ಮುಂದೆ ಬರುವುದಾಗಿ ತಿಳಿಸಿದ್ದರಲ್ಲದೆ ತಾವು ದಾಖಲಾಗಿರುವ ಆಸ್ಪತ್ರೆಯ ಇತರೆ ರೋಗಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಅಭಿಮಾನಿಗಳು ಆಸ್ಪತ್ರೆ ಬಳಿ ಬರದಂತೆ ಮನವಿ ಮಾಡಿದ್ದರು.

ಆದಾಗ್ಯೂ ಆಸ್ಪತ್ರೆಗೆ ಬಂದ ಅಭಿಮಾನಿಯೊಬ್ಬ ತನ್ನ ಮೊಬೈಲ್ ನಲ್ಲಿ ದರ್ಶನ್ ಅವರ ಫೋಟೋ ತೆಗೆದಿದ್ದೆನ್ನಲಾಗಿದ್ದು, ಇದು ಅಲ್ಲಿದ್ದವರ ಗಮನಕ್ಕೆ ಬರುತ್ತಲೇ ಕೋಪಗೊಂಡು ಆತನ ಮೊಬೈಲನ್ನು ಧ್ವಂಸ ಮಾಡಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...