alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಕಾರು ಅಪಘಾತ ಪ್ರಕರಣ: ಅನುಮಾನಗಳಿಗೆ ಕಾರಣವಾಯ್ತು ಪೊಲೀಸರ ನಡೆ

ಮೈಸೂರು: ನಟ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪೊಲೀಸರೇ ದರ್ಶನ್ ಅವರನ್ನು ಸೇಫ್ ಮಾಡಲು ಮುಂದಾಗಿದ್ದಾರೆಯೇ ಎಂಬ ಶಂಕೆ ಆರಂಭವಾಗಿದೆ.

ಮೈಸೂರು ಹೊರವಲಯದಲ್ಲಿ ನಡೆದ ದರ್ಶನ್ ಕಾರು ಅಪಘಾತಕ್ಕೂ ಮುನ್ನ ನಟ ದೇವರಾಜ್ ಅವರ ಹುಟ್ಟು ಹಬ್ಬದ ನಿಮಿತ್ತ ಪಬ್ ಒಂದರಲ್ಲಿ ಭರ್ಜರಿ ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್, ಪ್ರಣವ್, ಸೃಜನ್ ಲೋಕೇಶ್, ಹಾಸ್ಯನಟ ವಿಶ್ವ ಮತ್ತಿತರರು ಭಾಗಿಯಾಗಿದ್ದರು.

ಈ ಪಾರ್ಟಿಯ ವಿಡಿಯೋ ಈಗ ವೈರಲ್ ಆಗಿದೆ. ಪಾರ್ಟಿ ಮುಗಿಸಿ ಹೋಗುವಾಗ ಅಪಘಾತ ಸಂಭವಿಸಿದ್ದು, ದರ್ಶನ್ ಅವರೇ ಸ್ವತ: ಕಾರು ಚಲಾಯಿಸುತ್ತಿದ್ದರು ಎನ್ನಲಾಗಿತ್ತು. ಆದರೆ ಈಗ ಪ್ರಕರಣ ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತಿದ್ದು, ದರ್ಶನ್ ಅವರನ್ನು ಕಾನೂನು ಪ್ರಕ್ರಿಯೆಯಿಂದ ಸೇಫ್ ಮಾಡಲುಪೊಲೀಸರೇ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಅಪಘಾತಕ್ಕೆ ಸಂಬಂಧಿಸಿದಂತೆ ದರ್ಶನ್ ಗನ್ ಮ್ಯಾನ್ ಲಕ್ಷ್ಮಣ್, ವಿವಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಾರು ಚಲಾಯಿಸುತ್ತಿದ್ದ ಆಂಟನಿ ರಾಯ್ ಅವರ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು, ಆಂಟನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ನಡುವೆ ದರ್ಶನ್ ಅವರು ಹೇಳಿಕೆಗಳನ್ನು ನೀಡುವ ಸ್ಥಿತಿಯಲ್ಲಿದ್ದರೂ ಕೂಡ ಪೊಲೀಸರು ದರ್ಶನ್ ಅವರಿಂದ ಹೇಳಿಕೆ ಪಡೆಯದೇ ಗನ್ ಮ್ಯಾನ್ ಲಕ್ಷ್ಮಣ್ ರಿಂದ ಹೇಳಿಕೆ ಪಡೆದು ದಾಖಲಿಸಿಕೊಂಡಿರುವುದಾದರೂ ಯಾಕೆ…? ಎಂಬುದು ಇನ್ನೊಂದು ಪ್ರಶ್ನೆ. ಒಟ್ಟಾರೆ ಕಾರು ಅಪಘಾತ ಪ್ರಕರಣದಲ್ಲಿ ಸ್ವತಃ ಪೊಲೀಸರೇ ದರ್ಶನ್ ಅವರ ಪರ ನಿಂತಿದ್ದು, ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆಯೇ ಎಂಬ ಅನುಮಾನ ಈಗ ಆರಂಭವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...