alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯೊಂದಿಗೆ ಸಂಸಾರ ನಡೆಸಿ ಕೈಕೊಟ್ಟ ಯುವಕ

ಧಾರವಾಡ: ಪತಿಯನ್ನು ಬಿಟ್ಟು ತನಗಿಂತ ಕಿರಿಯ ವಯಸ್ಸಿನ ಯುವಕನೊಂದಿಗೆ ಹೋದ ಮಹಿಳೆಗೆ ಆತನೂ ಕೈಕೊಟ್ಟ ಘಟನೆ ನಡೆದಿದೆ.

ರಾಯಭಾಗ ತಾಲ್ಲೂಕಿನ ಮಹಿಳೆ ಈ ಹಿಂದೆಯೇ ಮದುವೆಯಾಗಿದ್ದು, ಪತಿಯ ಕಾಟದಿಂದ ಬೇಸತ್ತ ಆಕೆ ಗಂಡನನ್ನು ತೊರೆದು ನಿಗದಿ ಗ್ರಾಮದಲ್ಲಿ ನೆಲೆಸಿದ್ದಾಳೆ.

ಕೆಲವು ದಿನಗಳಲ್ಲಿ ಯುವಕನೊಬ್ಬನ ಜೊತೆಗೆ ಆಕೆಗೆ ಸಂಬಂಧ ಬೆಳೆದಿದೆ. ಮದುವೆಯಾಗುವುದಾಗಿ ನಂಬಿಸಿದ ಯುವಕ ಧಾರವಾಡದ ರಾಜೀವ್ ಗಾಂಧಿ ನಗರದಲ್ಲಿ ಮನೆ ಮಾಡಿ 3 ತಿಂಗಳು ಜೊತೆಗಿದ್ದಾನೆ.

ಕಳೆದ 8 ದಿನಗಳಿಂದ ಮನೆಗೆ ಬಾರದ ಆತ ತನ್ನ ಮನೆಗೆ ಬಂದು ನೆಲೆಸಿದ್ದಾನೆ. ಇದರಿಂದ ಕಂಗಾಲಾದ ಮಹಿಳೆ ಯುವಕನ ಮನೆಗೆ ಬಂದು ಮದುವೆಯಾಗುವಂತೆ ಒತ್ತಾಯಿಸಿದ್ದು, ಯುವಕ ಏನೂ ತಿಳಿಯದವನಂತೆ ನಟಿಸಿದ್ದಾನೆ.

ಅತ್ತ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆಗೆ ಯುವಕನೂ ಕೈಕೊಟ್ಟಿದ್ದು, ಯುವಕನ ಮನೆ ಎದುರು ಪ್ರತಿಭಟನೆ ನಡೆಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...