alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಿನಲ್ಲಿ ಇಂತಹ ಕೆಲಸ ಮಾಡಿ ಅಂದರ್ ಆದ್ರು….

ಧಾರವಾಡ: ಮದ್ಯದ ಅಮಲಿನಲ್ಲಿ ಜಗಳವಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಹನುಮಂತಗೌಡ ಹಾಗೂ ರಾಘವೇಂದ್ರ ಬಂಧಿತ ಯುವಕರು. ಹುಬ್ಬಳ್ಳಿ –ಧಾರವಾಡ ಮಧ್ಯದ ಹೋಟೆಲ್ ಒಂದರ ಬಳಿ ಮದ್ಯ ಸೇವನೆ ಮಾಡಿದ್ದ ಇಬ್ಬರು ಜಗಳವಾಡಿಕೊಂಡಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿದ ಸಂದರ್ಭದಲ್ಲಿ ಹನುಮಂತಗೌಡ ತನ್ನ ಬಳಿ ಇದ್ದ ಗನ್ ನಿಂದ ಗಾಳಿಯಲ್ಲಿ 2 ಸುತ್ತು ಫೈರಿಂಗ್ ಮಾಡಿದ್ದಾನೆ.

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ವಿದ್ಯಾಗಿರಿ ಠಾಣೆ ಪೊಲೀಸರು ಗನ್ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...