alex Certify
ಕನ್ನಡ ದುನಿಯಾ       Mobile App
       

Kannada Duniya

ಧಾರವಾಡದಲ್ಲಿ ನಡುಗಿದ ಭೂಮಿ

wala

ಧಾರವಾಡ: ತಡರಾತ್ರಿ ಧಾರವಾಡದ ಹಲವು ಬಡಾವಣೆಗಳಲ್ಲಿ ಭೂಕಂಪನವಾಗಿದೆ. ನಗರದ ಕುಮಾರೇಶ್ವರ ಬಡಾವಣೆ, ನಾರಾಯಣಪುರ ಸೇರಿದಂತೆ ಹಲವಾರು ಕಡೆಗಳಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ನಡಗಿದೆ.

ಸುಮಾರು 3 -4 ಸೆಕೆಂಡ್ ಕಾಲ ಭೂಮಿ ನಡುಗಿದ್ದು ಮನೆಯೊಳಗಿದ್ದವರೆಲ್ಲ ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಗಂಟೆಗಳ ಕಾಲ ಮನೆಯಿಂದ ಹೊರಗೆ ಆತಂಕದಿಂದ ಕಾಲ ಕಳೆದಿದ್ದಾರೆ.

ಭೂಮಿ ಕಂಪಿಸಿದ್ದರಿಂದ ಹಲವಾರು ಮನೆಗಳಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮತ್ತೆ ಕೆಲವು ಗೋಡೆಗಳ ಬಿರುಕು ಬಿಟ್ಟಿದೆ.

ಬೆಳಿಗ್ಗೆ ಅನೇಕ ಬಡಾವಣೆಗಳಲ್ಲಿ ಜನ ಗುಂಪುಗೂಡಿ ಆತಂಕದಿಂದ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಭೂಮಿ ಅಲುಗಾಡಿದಂತಾಗಿ ಹೊರಗೆ ಓಡಿ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...