alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ಪಡೆದವನಿಗೆ ಶಾಕ್

ಧಾರವಾಡ: ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡ ಯುವಕನೊಬ್ಬ ಮೈಮೇಲಿನ ಸಂಪೂರ್ಣ ಕೂದಲು ಕಳೆದುಕೊಂಡ ಆತಂಕಕಾರಿ ಘಟನೆ ನಡೆದಿದೆ.

ಧಾರವಾಡ ತಾಲ್ಲೂಕಿನ ಸೋಮಾಪುರ ಗ್ರಾಮದ 28 ವರ್ಷದ ಯುವಕ ಇಂತಹ ಸಮಸ್ಯೆಗೆ ಒಳಗಾದವ. 8 ತಿಂಗಳ ಹಿಂದೆ ಕೂದಲು ಉದುರುವುದು ಆರಂಭವಾಗಿದ್ದು, ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇದಕ್ಕಾಗಿ 60,000 ರೂ. ಹಣ ಕೂಡ ಕೊಟ್ಟಿದ್ದು, ಕೂದಲು ಬೆಳೆಯುವ ನಿರೀಕ್ಷೆಯಲ್ಲಿದ್ದ ಅವರಿಗೆ ಶಾಕ್ ಆಗಿದೆ. ಕೆಲವೇ ದಿನಗಳಲ್ಲಿ ತಲೆಯಲ್ಲಿದ್ದ ಕೂದಲು ಮಾತ್ರವಲ್ಲದೇ, ಮೈಮೇಲಿನ ಕೂದಲೆಲ್ಲಾ ಉದುರಿವೆ.

ಇದರಿಂದ ಕಂಗಾಲಾದ ಯುವಕ ಚಿಕಿತ್ಸೆ ನೀಡಿದವರನ್ನು ಸಂಪರ್ಕಿಸಿದಾಗ, ಅವರು ಸ್ಪಂದಿಸಿಲ್ಲ. ನೊಂದ ಯುವಕ ಅಳಲು ತೋಡಿಕೊಂಡಿದ್ದು, ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...