alex Certify ವೈವಿಧ್ಯಮಯ ಪರಿಸರದ ‘ದಾಂಡೇಲಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈವಿಧ್ಯಮಯ ಪರಿಸರದ ‘ದಾಂಡೇಲಿ’

ದಾಂಡೇಲಿ ಹುಬ್ಬಳ್ಳಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ. ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿರುವ ದಾಂಡೇಲಿ ನೈಸರ್ಗಿಕವಾಗಿ ಸುಂದರ ಪ್ರದೇಶವಾಗಿದೆ.

ದಾಂಡೇಲಿಯಿಂದ 23 ಕಿಲೋ ಮೀಟರ್ ದೂರದಲ್ಲಿ ಕವಳಾ ಗುಹೆಗಳಿದ್ದು, ಇದರಲ್ಲಿ ಸುಮಾರು 5 ಅಡಿ ಎತ್ತರದ ನಿಸರ್ಗ ನಿರ್ಮಿತ ಶಿವಲಿಂಗವಿದೆ. ದಾಂಡೇಲಿ ಅಭಯಾರಣ್ಯದ ಮೂಲಕ ಸುಮಾರು 350 ಮೆಟ್ಟಿಲುಗಳನ್ನು ಹತ್ತಿ ಇಲ್ಲಿಗೆ ತಲುಪಬಹುದು.

ದಾಂಡೇಲಿಯಿಂದ ಸುಮಾರು 32 ಕಿ.ಮೀ. ದೂರದಲ್ಲಿ ಸಿಂಥೇರಿ ರಾಕ್ಸ್ ಇದ್ದು, 500 ಅಡಿ ಎತ್ತರದ ಏಕಶಿಲೆ ಬುಡದಲ್ಲಿ ಕಾಳಿ ನದಿ ಹರಿಯುತ್ತದೆ. ನಿಸರ್ಗ ನಿರ್ಮಿತ ಗುಹೆಗಳು, ಜಲಪಾತವಿದೆ. ಇಲ್ಲಿರುವ ಗುಂಡಿಗಳು ಆಳವಾಗಿದ್ದು, ಅಪಾಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ದಾಂಡೇಲಿಯಿಂದ 25 ಕಿಲೋ ಮೀಟರ್ ದೂರದಲ್ಲಿ ಸೈಕ್ ಪಾಯಿಂಟ್ ಮೂಲಕ ಕಾಳಿ ಕಣಿವೆಯ ರುದ್ರ ರಮಣೀಯ ನೋಟ ಕಣ್ತುಂಬಿಕೊಳ್ಳಬಹುದಾಗಿದೆ. ರಿವರ್ ರಾಫ್ಟಿಂಗ್ ಗೂ ಕಾಳಿ ನದಿ ಫೇಮಸ್. ದಾಂಡೇಲಿ ಅಭಯಾರಣ್ಯದಲ್ಲಿ ನಿಸರ್ಗಧಾಮಗಳಿದ್ದು, ಮೊದಲೇ ಬುಕ್ ಮಾಡಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕಿದೆ. ಇನ್ನೂ ಹಲವು ಸ್ಥಳಗಳು ಇಲ್ಲಿದ್ದು, ಮಾಹಿತಿ ಪಡೆದುಕೊಂಡು ವೀಕ್ಷಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...