alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಕ್ಕೆಜೋಳ, ಶೇಂಗಾ, ತೊಗರಿಗೆ ಬೆಂಬಲ ಬೆಲೆ ನಿಗದಿ

ಬೆಂಗಳೂರು: ಶೇಂಗಾ ಕ್ವಿಂಟಾಲ್ ಗೆ 4450 ರೂ., ತೊಗರಿ ಕ್ವಿಂಟಾಲ್ ಗೆ 5450 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಈ ಕುರಿತು ಮಾಹಿತಿ ನೀಡಿದ್ದು, ಶೇಂಗಾ ಖರೀದಿಗೆ ತಕ್ಷಣವೇ 40 ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಿದ್ದು, ಕ್ವಿಂಟಾಲ್ ಗೆ 4450 ರೂ. ಬೆಂಬಲ ಬೆಲೆಯಡಿ 47,500 ಮೆಟ್ರಿಕ್ ಟನ್ ಶೇಂಗಾ ಖರೀದಿಗೆ ಸಮ್ಮತಿಸಿದೆ. ತೊಗರಿಗೆ 5450 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ಖರೀದಿ ಕೇಂದ್ರ ಆರಂಭಿಸಲು ಕೇಂದ್ರದಿಂದ ಇನ್ನೂ ಒಪ್ಪಿಗೆ ದೊರೆತಿಲ್ಲ.

ಮೆಕ್ಕೆಜೋಳಕ್ಕೆ 1425 ರೂ. ಬೆಂಬಲ ಬೆಲೆ ನಿಗದಿಮಾಡಲಾಗಿದೆ. ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಕ್ವಿಂಟಾಲ್ ಮೆಕ್ಕೆಜೋಳ 950 ರೂ. ಗೆ ಮಾರಾಟವಾಗಿ ರೈತರಿಗೆ ಅನ್ಯಾಯವಾಗ್ತಿದೆ. ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಕೇಂದ್ರಕ್ಕೆ ಅನುಮತಿ ಕೇಳಲಾಗಿದೆ. ಪಡಿತರ ವ್ಯವಸ್ಥೆಯಲ್ಲಿ ಬಳಕೆ ಮಾಡುವಂತಿದ್ದರೆ ಮಾತ್ರ ಬೆಂಬಲ ಬೆಲೆಯಡಿ ಖರೀದಿಸುವಂತೆ ಕೇಂದ್ರ ಷರತ್ತು ವಿಧಿಸಿದೆ.

ರಾಜ್ಯದಲ್ಲಿ ಮೆಕ್ಕೆಜೋಳ ಆಹಾರವಾಗಿ ಬಳಸುವುದಿಲ್ಲವಾದ್ದರಿಂದ ನಿಯಮ ಪಾಲಿಸಲು ಸಾಧ್ಯವಾಗ್ತಿಲ್ಲ. ಇಲ್ಲಿಂದ ಬೆಂಬಲ ಬೆಲೆಯಡಿ ಖರೀದಿಸಿ, ಉತ್ತರ ಭಾರತದ ರಾಜ್ಯಗಳಿಗೆ ಕಳಿಸಲು ಅವಕಾಶಕ್ಕಾಗಿ ಮನವಿ ಮಾಡಲಾಗಿದೆ. ಆದರೆ, ಕೇಂದ್ರದ ಸ್ಪಂದನೆ ಸಿಕ್ಕಿಲ್ಲ ಎಂದು ಸಚಿವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...