alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ಕೆ. ರವಿ ಪುಣ್ಯತಿಥಿಗೆ ಸರ ಅಡ ಇಟ್ಟ ತಾಯಿ

dk-ravi-motehr

ಬೆಂಗಳೂರು: ದಕ್ಷ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮ ಇಂದು ನಡೆಯಿತು. ಡಿ. ಕೆ. ರವಿ ಅವರ ಸ್ವಗ್ರಾಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿರುವ ಸಮಾಧಿ ಬಳಿ ಪೂಜೆ ಸಲ್ಲಿಸಲಾಯಿತು.

ಪುತ್ರ ಶೋಕಂ ನಿರಂತರಂ ಎನ್ನುವಂತೆ ಡಿ.ಕೆ. ರವಿ ಅವರ ತಾಯಿ ಮಗನನ್ನು ನೆನೆದು ಕಣ್ಣೀರಿಟ್ಟರು. ಮಾರ್ಚ್ 16ಕ್ಕೆ ಡಿ.ಕೆ. ರವಿ ನಿಧನರಾಗಿ ಒಂದು ವರ್ಷ ತುಂಬಲಿದ್ದು, ಸಂಪ್ರದಾಯದ ಪ್ರಕಾರ ವರ್ಷ ತುಂಬುವ ಮೂರು ದಿನಗಳ ಮೊದಲೇ ತಿಥಿ ಕಾರ್ಯವನ್ನು ಮಾಡಬೇಕಿದೆ. ಅದರಂತೆ ತಿಥಿ ಕಾರ್ಯ ನೆರವೇರಿಸಲಾಯಿತು. ಡಿ.ಕೆ. ರವಿ ನಿಧನರಾದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಯಾವುದೇ ನೆರವು ಸಿಕ್ಕಿಲ್ಲ ಎನ್ನಲಾಗಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಡಿ.ಕೆ. ರವಿ ಕುಟುಂಬದವರು ವರ್ಷದ ಪುಣ್ಯತಿಥಿ ಕಾರ್ಯಕ್ರಮ ನಡೆಸಲು ಕಷ್ಟವಾಗಿದ್ದು, ಇದಕ್ಕಾಗಿ ಅವರ ತಾಯಿಯವರ ಸರವನ್ನು ಅಡವಿಡಲಾಗಿದೆ. ಸರ್ಕಾರದಿಂದ ನೆರವು ನೀಡಬೇಕೆಂದು ಕುಟುಂಬದವರು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...