alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ಕೆ. ಬ್ರದರ್ಸ್ ಅಸಮಾಧಾನಕ್ಕೆ ಕಾಂಗ್ರೆಸ್ ನಾಯಕರು ಕಂಗಾಲು?

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಯ ಕಸರತ್ತು ನಡೆಯುತ್ತಲೇ ಇದೆ. ಯಡಿಯೂರಪ್ಪನವರ ಬಳಿಕ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲು ವೇದಿಕೆ ಸಿದ್ದಗೊಂಡಿದೆ.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಸಹೋದರರ ಅಸಮಾಧಾನದ ಬಾಂಬ್ ಸ್ಫೋಟಗೊಂಡಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ತಲೆದೋರುವ ಎಲ್ಲ ಸಂಕಷ್ಟಗಳ ಸಂದರ್ಭಗಳಲ್ಲೂ ಕೆಲಸ ಮಾಡೋಕೆ, ಮುಂದೆ ನಿಂತು ಯುದ್ಧ ಮಾಡೋಕೆ ನಾವು ಬೇಕು. ಆದರೆ ಅಧಿಕಾರದ ವಿಚಾರ ಬಂದಾಗ ಮಾತ್ರ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ರಾಜ್ಯ ಕಾಂಗ್ರೆಸ್ ನ ನೂತನ ಶಾಸಕರು ತಂಗಿರುವ ಹಿಲ್ಟನ್ ಹೋಟೆಲ್ ನಿಂದ ಹೊರನಡೆದ ಡಿ.ಕೆ.  ಬ್ರದರ್ಸ್ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಹಾಗೂ ದೂರವಾಣಿ ಕರೆಗಳನ್ನೂ ಸ್ವೀಕರಿಸಿಲ್ಲ. ಇಂದಿನ ಪ್ರಮಾಣವಚನ ಸ್ವೀಕಾರದ ಬಳಿಕ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಿದ್ದು, ಇದಕ್ಕೆ ಡಿಕೆಎಸ್ ಸಹೋದರರ ಸಹಕಾರ ಬೇಕೇಬೇಕು.

ಹೀಗಾಗಿ ಕಡೆಗೂ ಡಿ.ಕೆ. ಶಿವಕುಮಾರರನ್ನು ಸಂಪರ್ಕಿಸಿದ ಕಾಂಗ್ರೆಸ್ ಹಿರಿಯ ನಾಯಕರು ಸಮಾಧಾನಪಡಿಸಿದ್ದು, ಬಳಿಕ ಹಿಲ್ಟನ್ ಹೋಟೆಲ್ ಗೆ ಆಗಮಿಸಿದ ಶಿವಕುಮಾರ್ ಕಳೆದ 15 ದಿನಗಳಿಂದ ಮನೆ ಸೇರಿರಲಿಲ್ಲ. ಹಾಗಾಗಿ ಮನೆ ಊಟ ಮಾಡೋಣವೆಂದು ಹೋಗಿದ್ದೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ಬದ್ದ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...