alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಲಿಂಡರ್ ಸ್ಪೋಟಕ್ಕೆ ಮಹಿಳೆ ಬಲಿ

ಸಿಲಿಂಡರ್ ಸ್ಪೋಟದಿಂದ ಮಹಿಳೆಯೊಬ್ಬರು ಸಾವು ಕಂಡು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಭದ್ರಾವತಿಯ ಕೂಲಿಬ್ಲಾಕ್ ಶೆಡ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಕಲಾ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿದ್ದ ಕಾರಣ ಮನೆಯ ಹೊರಗಡೆ ಇಟ್ಟಿದ್ದಾರೆ. ಸೋರಿಕೆಯಾದ ಸಿಲಿಂಡರ್ ಒಮ್ಮೆಲೆ ಸ್ಪೋಟಗೊಂಡಿದ್ದು, ಸರಸ್ವತಿ ಎಂಬುವರು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಶಾಸಕ ಎಂ.ಜೆ. ಅಪ್ಪಾಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...