alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಲ್ಲೇ ಕತ್ತು ಕೊಯ್ದುಕೊಂಡು ಸೈಕೋ ಜೈಶಂಕರ್ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಿಕೃತಕಾಮಿ ಸೈಕೋ ಕಿಲ್ಲರ್ ಜೈಶಂಕರ್ ಬ್ಲೇಡ್ ನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾತ್ರಿ 2 ಗಂಟೆಗೆ ಆತ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡಿದ್ದು, ಗಂಭೀರವಾದ ಗಾಯಗಳಾಗಿವೆ. ಜೈಲಿನ ಸಿಬ್ಬಂದಿ ಜೈಲಿನ ಆಸ್ಪತ್ರೆಗೆ, ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾನೆ. 2 ವರ್ಷಗಳ ಹಿಂದೆ ಜೈಲಿನ ರಕ್ಷಣಾ ಗೋಡೆ ಹಾರಿ ಪರಾರಿಯಾಗಲೆತ್ನಿಸಿದ್ದ ಜೈಶಂಕರ್ ಸೊಂಟ ಮುರಿದುಕೊಂಡಿದ್ದ. ಆತನ ವರ್ತನೆ ಬದಲಾಗಿದ್ದರಿಂದ ಇತ್ತೀಚೆಗೆ ಪ್ರತ್ಯೇಕ ಸೆಲ್ ನಲ್ಲಿರಿಸಲಾಗಿತ್ತು ಎನ್ನಲಾಗಿದೆ.

2 ವರ್ಷಗಳ ಹಿಂದೆ ಜೈಲಿಂದ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಜೈಶಂಕರನನ್ನ  ಹೊಸೂರು ರಸ್ತೆಯ ಕೂಡ್ಲು ಗೇಟ್ ಬಳಿಯ ಸದ್ಗುರು ಸಾಯಿ ಶಾಲೆಯ ಬಳಿ ಬಂಧಿಸಲಾಗಿತ್ತು. ಪರಾರಿಯಾಗಿದ್ದ ಆತನ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿತ್ತು. ಜೈಶಂಕರ್ ನಾಪತ್ತೆಯಾಗಿದ್ದರಿಂದ ರಾಜ್ಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವಿಕೃತ ಕಾಮಿ ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಸರ್ಕಾರ ಘೋಷಿಸಿತ್ತು. 24ಕ್ಕೂ ಅಧಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಜೈಶಂಕರ್ ಮೇಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...