alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಲಕರ ನ್ಯೂಡ್ ಫೋಟೋ ತೆಗೆದ ಬಾಲಕ ಮಾಡಿದ್ದೇನು?

images

ಮಕ್ಕಳಿಗೆ ಮೊಬೈಲ್, ಇಂಟರ್ನೆಟ್ ನೀಡುವ ಮೊದಲು ಪಾಲಕರು ನೂರು ಬಾರಿ ಯೋಚನೆ ಮಾಡುವ ಅಗತ್ಯವಿದೆ. ಮಕ್ಕಳಿಗೆ ಫೋನ್ ನೀಡಿ ಆರಾಮಾಗಿರುವ ಪಾಲಕರ ನಿದ್ದೆಗೆಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರಿನ 13 ವರ್ಷದ ಬಾಲಕನೊಬ್ಬ ತನ್ನ ತಂದೆ-ತಾಯಿ ಒಂದಾಗಿರುವ ಖಾಸಗಿ ಫೋಟೋಗಳನ್ನು ಅಪರಿಚಿತನೊಬ್ಬನಿಗೆ ನೀಡಿ ಪಾಲಕರ ಮಾನವನ್ನು ಮಗನೇ ಹರಾಜು ಹಾಕಿದ್ದಾನೆ.

ಮೇ 24ರಂದು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. 13 ವರ್ಷದ ಬಾಲಕನೊಬ್ಬ 10 ಗಂಟೆಗೂ ಹೆಚ್ಚು ಕಾಲ ಫೇಸ್ಬುಕ್ ನಲ್ಲಿರುತ್ತಿದ್ದ ಎನ್ನಲಾಗಿದೆ. ಅಲ್ಲಿ ತೇಜಲ್ ಪಟೇಲ್ ಎಂಬಾತನ ಪರಿಚಯವಾಗಿದೆ.

ಮೊದಲು ಮಾಮೂಲಿ ಮಾತುಗಳನ್ನಾಡ್ತಾ ಇದ್ದ ತೇಜಲ್ ನಂತ್ರ ಕೆಟ್ಟ ಭಾಷೆಗಳನ್ನು ಶುರುಮಾಡಿದ್ದ. ಬಾಲಕನಿಗೆ ನ್ಯೂಡ್ ಫೋಟೋ ಕಳುಹಿಸುವಂತೆ ಹೇಳಿದ್ದ. ನಂತ್ರ ತಂದೆ-ತಾಯಿಯ ಪೋಟೋ ಕಳುಹಿಸಲು ಹೇಳಿದ್ದ. ಇದಾದ ನಂತ್ರ ಬಾಲಕನಿಂದಲೇ ತಂದೆ-ತಾಯಿ ಫೋನ್ ನಂಬರ್ ಪಡೆದು ಬ್ಲಾಕ್ಮೇಲ್ ಮಾಡ್ತಾ ಇದ್ದ. 1 ಕೋಟಿ ರೂಪಾಯಿ ನೀಡದಿದ್ದಲ್ಲಿ ಫೋಟೋಗಳನ್ನು ಫೇಸ್ಬುಕ್ ಗೆ ಹಾಕುವುದಾಗಿ ಬೆದರಿಸಿದ್ದ. ಈ ಸಂಬಂಧ ಪಾಲಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...