alex Certify
ಕನ್ನಡ ದುನಿಯಾ       Mobile App
       

Kannada Duniya

ಶಶಿಕಲಾ ಪಕ್ಕದಲ್ಲೇ ಇದ್ದ ಸೈನೈಡ್ ಮಲ್ಲಿಕಾ ಸ್ಥಳಾಂತರ

fb_1487392934_800x420

ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ವಿಕೆ ಶಶಿಕಲಾ ಅವರ ಪಕ್ಕದ ಸೆಲ್ ನಲ್ಲಿ ಸರಣಿ ಹಂತಕಿ ಸೈನೈಡ್ ಮಲ್ಲಿಕಾ ಇದ್ಲು. ಪಕ್ಕದಲ್ಲೇ ಮಹಾ ಪಾತಕಿಯೊಬ್ಬಳಿರೋದ್ರಿಂದ ಸಹಜವಾಗಿಯೇ ಶಶಿಕಲಾ ಕೂಡ ಆತಂಕಗೊಂಡಿದ್ರು. ಆದ್ರೀಗ ಅವಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.

6 ಮಹಿಳೆಯರನ್ನು ಕೊಂದು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಸೈನೈಡ್ ಮಲ್ಲಿಕಾಳನ್ನ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ ಅಂತಾ ಮೂಲಗಳು ತಿಳಿಸಿವೆ. ಸೈನೈಡ್ ಮಲ್ಲಿಕಾ ಅಲಿಯಾಸ್ ಕೆಡಿ ಕೆಂಪಮ್ಮಳ ಸೆಲ್, ಶಶಿಕಲಾ ಇದ್ದ ಜೈಲು ಕೋಣೆಗೆ ಅತ್ಯಂತ ಸಮೀಪದಲ್ಲಿತ್ತು.

ಮಲ್ಲಿಕಾಳಿಂದ ಶಶಿಕಲಾಗೆ ಅಪಾಯವಾಗಬಹುದು ಅನ್ನೋ ಆತಂಕವಿದ್ದಿದ್ದರಿಂದ ಹಂತಕಿಯನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಭದ್ರತಾ ಕಾರಣಗಳಿಂದ್ಲೂ ಸೈನೈಡ್ ಮಲ್ಲಿಕಾಳನ್ನು ಹಿಂಡಲಗಾ ಜೈಲಿಗೆ ಕಳಿಸಲಾಗಿದೆ ಎನ್ನಲಾಗ್ತಾ ಇದೆ. ಮಲ್ಲಿಕಾ ಸ್ಥಳಾಂತರದ ಬಗ್ಗೆ ಜೈಲು ಅಧಿಕಾರಿಗಳು ಯಾರಿಗೂ ಮಾಹಿತಿ ನೀಡಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...