alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳೂರಿನ ’ಪಿಂಕಿ’ಗೆ ಕ್ಯೂಟೆಸ್ಟ್ ಇಂಡಿಯನ್ ಡಾಗ್ ಪಟ್ಟ

ಮಂಗಳೂರು: ಮಂಗಳೂರಿನಲ್ಲಿರುವ ’ಪಿಂಕಿ’ ಎಂಬ ನಾಯಿ ಈಗ ದೇಶದಲ್ಲಿಯೇ ಅತಿ ಸುಂದರವಾದ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಯಿಗೂ ಸೌಂದರ್ಯ ಸ್ಪರ್ಧೆನಾ ಅಂತ ಅಚ್ಚರಿ ಅಲ್ವಾ.

ಹೌದು….ಪೆಟಾ ಸಂಸ್ಥೆ ನಡೆಸಿದ ‘ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಕಂಟೆಸ್ಟ್’ನ ಅಂತಿಮ ಸುತ್ತಿನಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಯ ಬೀದಿನಾಯಿ ಪಿಂಕಿ ನಂ.1 ಪ್ರಶಸ್ತಿ ಗಳಿಸಿದೆ. ದೇಶ-ವಿದೇಶಗಳ ವಿಶೇಷವಾದ ನಾಯಿಗಳನ್ನು ಕೋಟ್ಯಂತರ ರೂ. ನೀಡಿ ತಂದು ಸಾಕುವ ಈ ಕಾಲಘಟ್ಟದಲ್ಲಿ ಸಮಾಜ ಸೇವಕಿ ಜೀನ್ ಕ್ರಾಸ್ತಾ ಎಂಬುವರು ಮಂಗಳೂರಿನ ಲೇಡಿ ಹಿಲ್ ಬಳಿ ನಿರ್ಮಾಣ ಹಂತದ ಕಟ್ಟಡದೊಳಗೆ ಅಪಾಯಕ್ಕೆ ಸಿಲುಕಿದ್ದ 6 ತಿಂಗಳ ಈ ಬೀದಿ ನಾಯಿಮರಿಯನ್ನು ತಂದು ರಕ್ಷಿಸಿ, ಅದನ್ನು ಸಲಹಿದ್ದಾರೆ. ಹೀಗೆ ರಕ್ಷಿಸಲ್ಪಟ್ಟ ಪಿಂಕಿಯೇ ಇಂದು ಕ್ಯೂಟೆಸ್ಟ್ ಇಂಡಿಯನ್ ಡಾಗ್ ಪಟ್ಟಕ್ಕೇರಿದೆ. ಅಷ್ಟಕ್ಕೂ ಪಿಂಕಿ ಸೌಂದರ್ಯ ಸ್ಪರ್ಧೆಗೆ ಆಯ್ಕೆ ಆದದ್ದು ಹೇಗೆ ಗೊತ್ತಾ…?

ಪೆಟಾ ಸಂಸ್ಥೆ ಬೀದಿಯಿಂದ ರಕ್ಷಿಸಿ, ಸಾಕಿದ ನಾಯಿಯ ಚಿತ್ರವನ್ನು ಸ್ಪರ್ಧೆಗೆ ಕಳುಹಿಸಿಕೊಡುವಂತೆ ಆಹ್ವಾನ ನೀಡಿತ್ತು. ದೇಶಾದ್ಯಂತ ಸಾವಿರಾರು ಮಂದಿ ಸ್ಪರ್ಧೆಗೆ ದೇಸಿ ನಾಯಿಗಳ ಚಿತ್ರ ಕಳಿಸಿಕೊಟ್ಟಿದ್ದರು. ಅಂತಿಮ ಸುತ್ತಿನಲ್ಲಿದ್ದ 10 ನಾಯಿಗಳ ಪೈಕಿ ಕರ್ನಾಟಕದಿಂದ ಏಕೈಕ ಶ್ವಾನ ಪಿಂಕಿ ಆಯ್ಕೆಯಾಗಿದೆ. ಜು.29 ರಂದು ನಡೆದ ಫೈನಲ್‌ನಲ್ಲಿ ಪಿಂಕಿ ಆಯ್ಕೆಯಾಗಿದ್ದು, ದೇಶದಲ್ಲಿಯೇ ಅತಿ ಸುಂದರವಾದ ಶ್ವಾನ ಎಂದು ಘೋಷಿಸಲ್ಪಟ್ಟಿದೆ. ದ್ವಿತೀಯ ಪ್ರಶಸ್ತಿ ಬ್ರೌನಿ ಮತ್ತು ತೃತೀಯ ಪ್ರಶಸ್ತಿ ಚೂಚು ಎಂಬ ಶ್ವಾನಗಳಿಗೆ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...