alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ಸತ್ತ ಎಂಬ ಸುಳ್ಳು ಸುದ್ದಿಯನ್ನು ಪೋಷಕರೇ ಹಬ್ಬಿಸಿದರು !

8TsHWವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಚವನಭಾವಿ ಗ್ರಾಮದ ವಾಸಿಯೊಬ್ಬರು ತಮ್ಮ 10 ವರ್ಷದ ಮಗ ಮೃತಪಟ್ಟಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಮಾಡಲು ಕಾರಣವೇನು ಗೊತ್ತಾ? ಮುಂದೆ ಓದಿ.

ನಾಗರಾಜ್ ಎಂಬ ಹತ್ತು ವರ್ಷದ ಬಾಲಕ ಮನೆಯ ಮಹಡಿ ಮೇಲೆ ಕುಳಿತಿದ್ದಾಗ ಎರಡು ಕಾಗೆಗಳು ಕಚ್ಚಾಡುವುದನ್ನು ನೋಡಿದ್ದಾನೆ. ಇದನ್ನು ತನ್ನ ಪೋಷಕರಿಗೆ ತಿಳಿಸಿದ್ದು, ಆತನ ಪೋಷಕರು ಇದನ್ನು ಅಪಶಕುನವೆಂದು ಭಾವಿಸಿ ಅಕ್ಕ ಪಕ್ಕದವರ ಸಲಹೆ ಕೇಳಿದ್ದಾರೆ.

ಆಗ ಅವರು, ದೋಷ ಪರಿಹಾರಕ್ಕಾಗಿ ಮಗ ಸತ್ತನೆಂದು ಸುಳ್ಳು ಸುದ್ಧಿ ಹಬ್ಬಿಸಿ. ಎಲ್ಲರೂ ಬಂದ ಮೇಲೆ ನಿಜ ಸಂಗತಿ ತಿಳಿಸಿ ಹೋಳಿಗೆ ಊಟ ಹಾಕಿಸಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಸುಳ್ಳು ಹೇಳಿ ಬಾಲಕನ ಅಜ್ಜಿ, ಅತ್ತೆ ಎಲ್ಲರಿಗೂ ಫೋನ್ ಮಾಡಿ ಅಂತಿಮ ದರ್ಶನಕ್ಕೆ ಬರುವಂತೆ ಬಾಲಕನ ಪೋಷಕರು ಹೇಳಿದ್ದಾರೆ. ಅವರೆಲ್ಲ ಬಂದ ನಂತರ ಘಟನೆ ವಿವರಿಸಿ, ಹೋಳಿಗೆ ಊಟ ಹಾಕಿಸಿ ದೋಷ ಪರಿಹಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...