alex Certify
ಕನ್ನಡ ದುನಿಯಾ       Mobile App
       

Kannada Duniya

ಬಾವಿಯಲ್ಲಿನ ಮೊಸಳೆ ಕಂಡು ಬೆಚ್ಚಿಬಿದ್ರು ಜನ

ವಿಜಯಪುರ: ಸಾಮಾನ್ಯವಾಗಿ ನದಿ, ಹಳ್ಳ –ಕೊಳ್ಳಗಳಲ್ಲಿ ಕಾಣಸಿಗುವ ಮೊಸಳೆ ವಿಜಯಪುರದ ವಾರ್ಡ್ ನಂ.20 ರಲ್ಲಿರುವ ಐತಿಹಾಸಿಕ ಬಾವಿಯಲ್ಲಿ ಕಂಡು ಬಂದಿದೆ.

ತಿಂಗಳುಗಳ ಹಿಂದೆಯೇ ಮಕ್ಕಳು ತೆರೆದ ಬಾವಿಯಲ್ಲಿ ಪುಟ್ಟ ಮೊಸಳೆ ನೋಡಿದ್ದಾಗಿ ಹೇಳಿದ್ದರೂ, ಸುತ್ತಲಿನ ನಿವಾಸಿಗಳು ತಲೆಕೆಡಿಸಿಕೊಂಡಿರಲಿಲ್ಲ.

ಈಗ ಸುಮಾರು 5 -6 ಅಡಿಗೂ ಉದ್ದ ಬೆಳೆದಿರುವ ಮೊಸಳೆ ಕೆಲ ದಿನಗಳಿಂದ ದಡಕ್ಕೆ ಬಂದು ಬಿಸಿಲಿಗೆ ಮೈಯೊಡ್ಡುತ್ತಿದೆ. ಮಕ್ಕಳು, ನಿವಾಸಿಗಳು ಮೊಸಳೆ ಕಂಡು ಭಯಗೊಂಡಿದ್ದಾರೆ.

ಅಕ್ಕಪಕ್ಕದ ನಿವಾಸಿಗಳು ಪಾಲಿಕೆ ಅಧಿಕಾರಿಗಳಿಗೆ, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ, ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.

ಈ ಭಾಗದಲ್ಲಿ ಮೀನು ಹಿಡಿಯುವವರ ಬಲೆಗೆ ಸಿಕ್ಕಿದ್ದ ಮೊಸಳೆ ಮರಿಯನ್ನು ಬಾವಿಗೆ ತಂದು ಬಿಟ್ಟಿದ್ದು, ಅದು ದೊಡ್ಡದಾಗಿರಬಹುದೆಂದು ಹೇಳಲಾಗಿದೆ.

ಅದೇನೆ ಇರಲಿ, ಬಾವಿಯ ಸಮೀಪದಲ್ಲೇ ವಾಸವಾಗಿರುವ ನಿವಾಸಿಗಳು, ಮಕ್ಕಳು ಹೆಚ್ಚಾಗಿ ಓಡಾಡುತ್ತಾರೆ. ಅಪಾಯ ಸಂಭವಿಸುವ ಮೊದಲು ಮೊಸಳೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಒತ್ತಾಯಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...