alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ತೊಳೆಯುವಾಗಲೇ ಮೊಸಳೆ ದಾಳಿ

mosale-ramnd

ರಾಮನಗರ: ಕೆರೆಯಲ್ಲಿ ನಾಯಿಯ ಮೈ ತೊಳೆಯುವಾಗ ವ್ಯಕ್ತಿಯ ಮೇಲೆ ಮೊಸಳೆ ದಾಳಿ ನಡೆಸಿದ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ತಟ್ಟಿಕೆರೆಯ ಸಮೀಪ ನಡೆದಿದೆ.

ತಟ್ಟಿಕೆರೆ ಅರಣ್ಯ ಪ್ರದೇಶದಲ್ಲಿರುವ ಕೆರೆಯಲ್ಲಿ ಬೆಂಗಳೂರಿನ ಮಧು, ನಾಯಿ ಮೈ ತೊಳೆಯುವಾಗ ಮೊಸಳೆ ದಾಳಿ ಮಾಡಿದ್ದು, ಮಧು ಅವರ ಕೈ ತುಂಡಾಗಿದೆ ಎನ್ನಲಾಗಿದೆ.

ಬೆಂಗಳೂರಿನ ಮಧು ಪತ್ನಿಯೊಂದಿಗೆ ಕಾರಿನಲ್ಲಿ ಆಗಮಿಸಿದ್ದಾರೆ. ಕರೆತಂದಿದ್ದ ನಾಯಿಯ ಸ್ನಾನ ಮಾಡಿಸಲು ಕೆರೆಗೆ ಇಳಿದಿದ್ದಾರೆ.

ಇಲ್ಲಿ ಮೊಸಳೆ ಇವೆ ಎಂದು ಸ್ಥಳದಲ್ಲಿ ಫಲಕ ಹಾಕಿದ್ದರೂ, ಅದನ್ನು ಗಮನಿಸದೇ ಮಧು ಕೆರೆಗೆ ಇಳಿದಿದ್ದರು. ನಾಯಿ ಹಾಗೂ ಮಧು ಕೆರೆಯಲ್ಲಿದ್ದಾಗ ಮೊಸಳೆ ಒಮ್ಮೆಲೆ ದಾಳಿ ಮಾಡಿದ್ದು, ಮಧು ಅವರ ಕೈ ಕಚ್ಚಿದೆ.

ಜೊತೆಯಲ್ಲಿದ್ದ ಪತ್ನಿ ಬೆಂಗಳೂರಿನ ಆಸ್ಪತ್ರೆಗೆ ಮಧು ಅವರನ್ನು ಸೇರಿಸಿದ್ದಾರೆ. ಆನೇಕಲ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಕೆರೆ ಇದ್ದು, ಮೊಸಳೆ ಇರುವ ಬಗ್ಗೆ ಎಚ್ಚರಿಕೆ ಫಲಕ ಹಾಕಲಾಗಿದೆ. ಆದರೆ, ಇದನ್ನು ಗಮನಿಸದೇ ನಾಯಿಯೊಂದಿಗೆ ಮಧು ಕೆರೆಗೆ ಇಳಿದಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...