alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಸಳೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುವಕ

bagalko

ಬಾಗಲಕೋಟೆ: ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸುತ್ತಿದ್ದ ಯುವಕನೊಬ್ಬ, ಕೂದಲೆಳೆ ಅಂತರದಲ್ಲಿ ಮೊಸಳೆಯಿಂದ ಪಾರಾದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬನ್ನಿದಿನ್ನಿ ಗ್ರಾಮದ ಘಟಪ್ರಭಾ ಬ್ಯಾರೇಜ್ ಬಳಿ ಹನುಮಂತ ಎಂಬ ಯುವಕ ಎತ್ತುಗಳಿಗೆ ನೀರು ಕುಡಿಸುವಾಗ ಮೊಸಳೆ ಆತನ ಕಾಲಿಗೆ ಬಾಯಿ ಹಾಕಿ ಎಳೆದಿದೆ.

ಕೈಯಲ್ಲಿ ಎತ್ತುಗಳ ಹಗ್ಗ ಹಿಡಿದಿದ್ದ ಹನುಮಂತ ಜೋರಾಗಿ ಕಿರುಚಾಡಿದ್ದಾನೆ. ಕೂಡಲೇ ಸಮೀಪದಲ್ಲಿದ್ದ ಯುವಕರು ಧಾವಿಸಿ ಬಂದು ಹನುಮಂತನನ್ನು ಮೊಸಳೆಯಿಂದ ರಕ್ಷಿಸಿದ್ದಾರೆ.

ಆತನ ಕಾಲುಗಳಿಗೆ ಗಾಯವಾಗಿದ್ದು, ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ. ಎತ್ತುಗಳ ಹಗ್ಗ ಹಿಡಿದಿದ್ದರಿಂದ ಹನುಮಂತ ಬಚಾವ್ ಆಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...