alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಈ ಗ್ರಾಮದ ಮನೆಯಲ್ಲಿ ನಿತ್ಯ ನಡೆಯುತ್ತಿತ್ತು ಗೋ ವಧೆ

ಅಕ್ರಮವಾಗಿ ಗೋ ಮಾಂಸವನ್ನು ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ರಪ್ತು ಮಾಡುತ್ತಿದ್ದ ಕೆಲವರು, ಹುಕ್ಕೇರಿ ತಾಲೂಕಿನ ಯಮಕನಮರಡಿ ಆರ್.ಸಿ. ಗ್ರಾಮದ ಮನೆಯೊಂದರಲ್ಲಿ ನಿತ್ಯವೂ ಹತ್ತಾರು ಗೋವುಗಳನ್ನು ಹತ್ಯೆ ಮಾಡುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ತಮಗೆ ಬಂದ ದೂರಿನ ಮೇರೆಗೆ ಭಾನುವಾರದಂದು ಯಮಕನಮರಡಿ ಠಾಣೆ ಪೊಲೀಸರು ಭಾನುವಾರದಂದು ಈ ಮನೆ ಮೇಲೆ ದಾಳಿ ನಡೆಸಿದ್ದು, 49 ಹಸುಗಳನ್ನು ರಕ್ಷಿಸಿ, ಅಪಾರ ಪ್ರಮಾಣದ ಎಲುಬು, ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 25 ಮಂದಿ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಿತ್ಯವೂ ಇಲ್ಲಿ ಹಲವಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತಿತ್ತೆನ್ನಲಾಗಿದ್ದು, ಆರೋಪಿಗಳು ಗೋಮಾಂಸವನ್ನು ರಾಜ್ಯದ ವಿವಿಧ ಭಾಗಗಳು ಹಾಗೂ ಗೋವಾ, ಮಹಾರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದರಲ್ಲದೇ, ತಮ್ಮದೇ ಸ್ವಂತ ಮಾಂಸದ ಅಂಗಡಿಯಲ್ಲೂ ಮಾರಾಟ ಮಾಡುತ್ತಿದ್ದರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...