alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಳ ಕಿಡ್ನಿಯನ್ನೂ ಬಿಡಲಿಲ್ಲ ಕಳ್ಳರು..!

cow-haveri-d

ಹಾವೇರಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಕಿಡ್ನಿ ಕದ್ದೊಯ್ದ ಘಟನೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ನಡೆದಿದ್ದು, ದಂಡಿನಪೇಟೆಯ ಯಲ್ಲಪ್ಪ ಅವರಿಗೆ ಸೇರಿದ 2 ಹಸುಗಳು ಮೃತಪಟ್ಟಿವೆ.

ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕಿಲಾರಿ ತಳಿಯ 2 ಹಸುಗಳಿದ್ದು, ಅವುಗಳಲ್ಲಿ ಒಂದು ಹಸು ತಿಂಗಳ ಹಿಂದಷ್ಟೇ ಕರು ಹಾಕಿತ್ತು.

ತಡರಾತ್ರಿ ಕೊಟ್ಟಿಗೆಗೆ ನುಗ್ಗಿದ ದುಷ್ಕರ್ಮಿಗಳು ಹಸುಗಳ ಕಾಲುಗಳನ್ನು ಕಟ್ಟಿ ಹಾಕಿ, ಕಿಡ್ನಿಗಳನ್ನು ತೆಗೆದಿದ್ದಾರೆ. ಕೊಟ್ಟಿಗೆಯಲ್ಲಿ ಶಬ್ಧ ಕೇಳಿ ಬಂದ ಕಾರಣ ಯಲ್ಲಪ್ಪ ಮನೆಯ ಬಾಗಿಲು ತೆಗೆದಿದ್ದಾರೆ.

ಆಗ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆಗಾಗಲೇ 2 ಹಸುಗಳು ಮೃತಪಟ್ಟಿರುವುದು ಗೊತ್ತಾಗಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸಾಮಾನ್ಯವಾಗಿ ಜಾನುವಾರುಗಳನ್ನು ಕದ್ದು ಸಾಗಿಸುವ ಪ್ರಕರಣ ನಡೆದಿವೆ. ಜಾನುವಾರು ಕಿಡ್ನಿಯನ್ನೂ ಕಳವು ಮಾಡಿರುವುದು ಈ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...