alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಲ್ಲೂ ಜೊತೆಯಾದ ದಂಪತಿ

ಶಿವಮೊಗ್ಗ: ಇಷ್ಟು ದಿನ ಜೊತೆಯಾಗಿದ್ದ ಪತಿ ಇನ್ನಿಲ್ಲ ಎನ್ನುವುದನ್ನು ತಡೆಯಲಾಗದ ಪತ್ನಿಯೂ ಆಘಾತದಿಂದ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹಂಚಿನ ಸಿದ್ಧಾಪುರದಲ್ಲಿ ದಂಪತಿ ಸಾವಿನಲ್ಲೂ ಜೊತೆಯಾಗಿದ್ದಾರೆ. 70 ವರ್ಷದ ಹನುಮಂತಪ್ಪ ಅನಾರೋಗ್ಯದ ಕಾರಣ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಪತಿಯ ಸಾವಿನಿಂದ ಆಘಾತಕ್ಕೆ ಒಳಗಾದ ಪತ್ನಿ ಸರೋಜಮ್ಮ(52) ಅವರೂ ಮೃತಪಟ್ಟಿದ್ದಾರೆ.

ದಂಪತಿ ನಿಧನರಾದ ಸುದ್ದಿ ತಿಳಿದ ಸಂಬಂಧಿಕರು, ಗ್ರಾಮಸ್ಥರು ಅಂತಿಮ ದರ್ಶನ ಪಡೆದು ಗ್ರಾಮದ ಹೊರ ವಲಯದಲ್ಲಿರುವ ಮೃತರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...