alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಕನ್ನಡದ ಶಿರಸಿಯಲ್ಲಿ ದೇಶದ ಪ್ರಪ್ರಥಮ ಕಾಸ್ಮಿಕ್ ಸ್ಪ್ಲಾಷ್ ಪ್ರದರ್ಶನ

fnwy14

ಇದು ಹಳ್ಳಿ ಹುಡುಗನ ಅದ್ವಿತೀಯ ಸಾಧನೆ. ದೇಶದಲ್ಲಿ ಇದುವರೆಗೆ ಎಲ್ಲೂ ನಡೆಯದ ಬೆಳಕಿನ ಪ್ರದರ್ಶನ ಉತ್ತರ ಕನ್ನಡದ ಶಿರಸಿಯಲ್ಲಿ ಆಗಸ್ಟ್ 6 ರಂದು ನಡೆಯಲಿದೆ.

ಶಿರಸಿ ಗಡಿಕೈ ಊರಿನವರಾದ ವಿನಯ್ ಹೆಗಡೆ ಅವರದು ಕಲಾಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವುದರಲ್ಲಿ ಎತ್ತಿದ ಕೈ. ಈಗ ಇವರು ವಿನೂತನ ತಂತ್ರಜ್ಞಾನ ಬಳಸಿಕೊಂಡು ಗಾಳಿಯಲ್ಲಿ ಚಿತ್ರ ಬರೆಯಹೊರಟಿದ್ದಾರೆ.

ಕಾಸ್ಮಿಕ್ ಸ್ಪ್ಲಾಷ್ ಅಂದರೇನು..?

ವಿನಯ್ ಹೆಗಡೆ ಅನ್ವೇಷಿಸಿರುವ ಈ ಹೊಸ ಪ್ರಯೋಗ ಡಿಜಿಟಲ್ ತಂತ್ರಜ್ಞಾನದ ಮೂಲಕ ಗಾಳಿಯಲ್ಲಿ ಚಿತ್ರ ಹಿಡಿದು ನಿಲ್ಲಿಸುತ್ತಾರೆ. ಇನ್ನೊಂದು ಕಡೆ ನಿಂತ ಕಲಾವಿದ ಗಾಳಿಯಲ್ಲಿ ಕೈ ತಿರುವಿದರೆ ಚಿತ್ರ ಮೂಡುತ್ತದೆ. ಅನೇಕ ಬಣ್ಣ, ರೇಖೆಯ ಮೂಲಕ ಚಿತ್ತಾಕರ್ಷಕ ದೃಶ್ಯ ಮೂಡುತ್ತದೆ.

ವಿನಯ್ ಅವರು ಸಿಂಗಾಪುರದ ಪ್ರತಿಷ್ಠಿತ ಲುಕಾಸ್ ಎನಿಮೇಷನ್ ನಲ್ಲಿ ಜೆಡಿ ಮಾಸ್ಟರ್ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಹಾಲಿವುಡ್ ಡ್ರೀಮ್ಸ್ ವರ್ಕ್ಸ್ ಕಂಪನಿಯ ಉದ್ಯೋಗಿ. ಇವರು ಸ್ಜೆಂಜ್ ಮ್ಯಾಜಿಕ್, ಮಡಗಾಸ್ಕರ್ – 3, ಹೌ ಟು ಟ್ರೇನ್ ಟ್ರೋಲ್ಸ್, ಬಾಸ್ ಬೇಬಿ ಮುಂತಾದ ಚಲನಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.

ಎಷ್ಟೇ ಖ್ಯಾತಿ ಪಡೆದರೂ ಹುಟ್ಟೂರನ್ನು ಮರೆಯದೇ ತಮ್ಮ ಮೊದಲ ಬೆಳಕಿನ ಶೋ ತವರೂರಲ್ಲೇ ನಡೆಯಬೇಕೆಂಬ ಇವರ ಭಾವನೆಯನ್ನು ಶ್ಲಾಘಿಸಲೇಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...