alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಧರಿಸದ ಕ್ಯಾಬ್ ಚಾಲಕನಿಗೆ ದಂಡ…!

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಹೆಲ್ಮೆಟ್ ಹಾಕದೇ ಬೈಕ್ ಓಡಿಸುವವರನ್ನು ಹಿಡಿದು ದಂಡ ಹಾಕೋದು ಸಂಚಾರಿ ಪೊಲೀಸರ ಕರ್ತವ್ಯ. ಆದ್ರೆ ಕ್ಯಾಬ್ ಚಾಲಕರು ಕೂಡ ಹೆಲ್ಮೆಟ್ ಧರಿಸಬೇಕು ಅನ್ನೋ ನಿಯಮದ ಬಗ್ಗೆ ಎಲ್ಲಾದ್ರೂ ಕೇಳಿದ್ದೀರಾ?

ಇಂಥದ್ದೇ ವಿಚಿತ್ರ ಪ್ರಕರಣ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಡೆದಿದೆ. ಹೆಲ್ಮೆಟ್ ಹಾಕಿಲ್ಲ ಅನ್ನೋ ಕಾರಣಕ್ಕೆ ಸಂಚಾರಿ ಪೊಲೀಸರು ಕ್ಯಾಬ್ ಚಾಲಕನಿಗೆ ದಂಡ ಹಾಕಿದ್ದಾರೆ. ನವೀನ್ ಎಂಬ ಕ್ಯಾಬ್ ಚಾಲಕ ಅಕ್ಟೋಬರ್ 7ರಂದು ರಾತ್ರಿ 10 ಗಂಟೆ ವೇಳೆಗೆ ಗೋಕುಲ್ ರಸ್ತೆಯ ಕಡೆಗೆ ತೆರಳುತ್ತಿದ್ದ.

ಅವನನ್ನು ತಡೆದ ಸಂಚಾರಿ ಪೊಲೀಸರು ದಾಖಲೆಗಳನ್ನು ಕೇಳಿದ್ದಾರೆ. ಡಿಎಲ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ತೋರಿಸಿದ್ರೂ 500 ರೂಪಾಯಿ ದಂಡ ಕಟ್ಟು ಎಂದಿದ್ದಾರೆ. ಆತ ಒಲ್ಲೆ ಅಂದಿದ್ದಕ್ಕೆ ಕೆರಳಿದ ಪೊಲೀಸರು ಅವನಿಗೆ ನಿಂದಿಸಿದ್ದಾರೆ. ನಂತರ ಹೆಲ್ಮೆಟ್ ಹಾಕದೇ ಇದ್ದಿದ್ದಕ್ಕೆ 100 ರೂ. ದಂಡ ಕಟ್ಟು ಅಂತಾ ಚಲನ್ ಬರೆದು ಕೊಟ್ಟಿದ್ದಾರೆ.

ಕ್ಯಾಬ್ ಚಾಲಕರು ಹೆಲ್ಮೆಟ್ ಧರಿಸಬೇಕು ಅನ್ನೋ ನಿಯಮವಿಲ್ಲ ಅನ್ನೋದು ಸಂಚಾರಿ ಪೊಲೀಸರಿಗೆ ಗೊತ್ತೇ ಇಲ್ವಾ ಅನ್ನೋದು ನವೀನ್ ಪ್ರಶ್ನೆ. ಈ ರೀತಿ ಅಧಿಕಾರ ದುರುಪಯೋಗ ಮಾಡಿಕೊಳ್ತಿರೋ ಪೊಲೀಸರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...