alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಡಗಿನ ಜಲ ಪ್ರಳಯದ ಕಾರಣ ಬಿಚ್ಚಿಟ್ಟ ಭೂಗರ್ಭ ಶಾಸ್ತ್ರಜ್ಞರು

ಇತ್ತೀಚೆಗೆ ಕೊಡಗಿನಲ್ಲಿ ಕಾಣಿಸಿಕೊಂಡ ಭೀಕರ ಜಲಪ್ರಳಯ ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಇದಕ್ಕೆ ಕಾರಣವೇನು ಎಂಬುದು ಸಹ ತಿಳಿದಿರಲಿಲ್ಲ. ಈ ಅನಾಹುತ ಸಂಭವಿಸುವುದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರ ತಂಡ ಅಮೆರಿಕದ ಅತ್ಯಾಧುನಿಕ ಉಪಕರಣ ಬಳಸಿ ಈ ಸಮಸ್ಯೆಯ ಮೂಲ ಅರಿಯಲು ಪ್ರಯತ್ನಿಸಿದ್ದಾರೆ. ಹಾಗೇ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ ಭೂಕಂಪನವೇ ಇದಕ್ಕೆ ಕಾರಣ ಎಂದಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರೇಣುಕಾಪ್ರಸಾದ್ ಮತ್ತು ಡಾ. ಪರಮೇಶ್ ನಾಯಕ್ ನೇತೃತ್ವದ ಭೂಗರ್ಭ ಶಾಸ್ತ್ರಜ್ಞರ ತಂಡವು ಅಡ್ವಾನ್ಸ್ ಸರ್ಫೇಸ್ ಪರೀಕ್ಷೆಯ ಉಪಕರಣವನ್ನು ಬಳಸಿ ಅಧ್ಯಯನ ನಡೆಸುತ್ತಿದ್ದಾರೆ. ಇವರ ಪ್ರಕಾರ ಇಲ್ಲಿ ಕಂಪನ ಕಾಣಿಸಿಕೊಂಡಿದೆ. ಜನರ ಗಮನಕ್ಕೂ ಇದು ಬಂದಿದೆ. ಆದರೆ ಭೂಕಂಪನವನ್ನು ದಾಖಲಿಸುವ ಯಂತ್ರಗಳು ಇಲ್ಲ ಎಂದು ಹೇಳಿದ್ದಾರೆ.

ಯಾವತ್ತೋ ಆಗಿರುವ ಭೂಕಂಪನದಿಂದಾಗಿ ಭೂಮಿಯಲ್ಲಿ ಬಿರುಕು ಉಂಟಾಗಿರುತ್ತದೆ. ಈ ಬಿರುಕುಗಳ ಮೂಲಕ ನೀರು ಒಳ ನುಗ್ಗುತ್ತದೆ. ಕೊನೆಗೆ ಒತ್ತಡ ತಡೆಯಲಾಗದೇ ನೀರು ಹೊರಗೆ ಬರುತ್ತದೆ. ಹೀಗಾಗಿ ಭೂ ಕುಸಿತ ಸಂಭವಿಸುತ್ತದೆ. ಕೊಡಗಿನಲ್ಲಿ ಇದೇ ಆಗಿದ್ದು ಎಂದು ಮಾಹಿತಿ ನೀಡಿದ್ದಾರೆ.

ಅಡ್ವಾನ್ಸ್ ಸರ್ಫೇಸ್ ಪರೀಕ್ಷೆಯ ಉಪಕರಣ ಸುಮಾರು 500 ಮೀಟರ್ ಅಡಿ ಆಳದವರೆಗಿನ ಭೂಮಿಯಾಳದ ಚಿತ್ರವನ್ನು ಸೆರೆ ಹಿಡಿದು 2ಡಿ ಮತ್ತು 3ಡಿ ಚಿತ್ರಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಕೊಡಗಿನಲ್ಲಿ ಸಂಭವಿಸಿದ ಅನಾಹುತದ ಮಾಹಿತಿ ತಿಳಿಯಲು ಸಾಧ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...