alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋವನ್ನು 20 ಅಡಿ ದೂರಕ್ಕೆ ಎತ್ತೊಗೆದ ಆನೆ

ಕಾಡಾನೆಯೊಂದು ಚಲಿಸುತ್ತಿದ್ದ ಆಟೋ ಮೇಲೆ ದಾಳಿ ಮಾಡಿದ್ದು, ಬಳಿಕ ಸೊಂಡಿಲಿನಿಂದ 20 ಅಡಿ ದೂರಕ್ಕೆ ಎತ್ತೊಗೆದಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಆಲಿತೋಪು ಗ್ರಾಮದಲ್ಲಿ ನಡೆದಿದೆ.

ಬಜೆಕೊಲ್ಲಿ ಗ್ರಾಮದಿಂದ ಸಿದ್ಧಾಪುರಕ್ಕೆ ತೆರಳುವ ಮಾರ್ಗದಲ್ಲಿ ಈ ಕಾಡಾನೆ ಮೊದಲಿಗೆ ಕಾರೊಂದನ್ನು ಬೆನ್ನಟ್ಟಿಕೊಂಡು ಹೋಗಿದೆ. ಆದರೆ ಕಾರನ್ನು ಹಿಡಿಯಲು ಸಾಧ್ಯವಾಗದಿದ್ದಾಗ ಇದೇ ಮಾರ್ಗದಲ್ಲಿ ಬರುತ್ತಿದ್ದ ಆಟೋ ಮೇಲೆ ದಾಳಿ ಮಾಡಿದೆ.

ಕಾಡಾನೆ ದಾಳಿಯಿಂದ ಭಯಭೀತರಾದ ಆಟೋ ಚಾಲಕ ಮಹಮ್ಮದ್, ಪ್ರಯಾಣಿಕರಾದ ಸೇತುರಾಮ ಹಾಗೂ ಬಾಲಕೃಷ್ಣ ವಾಹನದಿಂದ ಇಳಿದು ಓಡುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಆನೆ, ಆಟೋವನ್ನು ತನ್ನ ಸೊಂಡಿಲಿನಿಂದ ಎತ್ತಿ 20 ಅಡಿ ದೂರಕ್ಕೆ ಎಸೆದಿದ್ದು, ಇದರಿಂದಾಗಿ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...