alex Certify
ಕನ್ನಡ ದುನಿಯಾ       Mobile App
       

Kannada Duniya

ನಿರಾಶ್ರಿತರಾದರೂ ನಿಲ್ಲದ ಫೈನಾನ್ಸ್ ಕಂಪನಿ ಕಿರುಕುಳ: ಬೇಸತ್ತ ಮಹಿಳೆ ಆತ್ಮಹತ್ಯೆ

ಮಡಿಕೇರಿ: ಭೀಕರ ಮಳೆ ಜಲಪ್ರಳಯಕ್ಕೆ ತುತ್ತಾಗಿ ಸಂಕಷ್ಟಕ್ಕೀಡಾಗಿರುವ ಕೊಡಗು ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಗಳು ಮಾತ್ರ ಇನ್ನೂ ತಮ್ಮ ವಸೂಲಿಗಾಗಿ ಜನರಿಗೆ ನೀಡುತ್ತಿರುವ ಕಾಟ ಮಾತ್ರ ಕಡಿಮೆ ಮಾಡುತ್ತಿಲ್ಲ. ಹೌದು, ಮೈಕ್ರೋ ಫೈನಾನ್ಸ್ ಸಂಘವೊಂದರ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಡಿಕೇರಿಯ ಮುಳ್ಳುಸೋಗೆ ಗ್ರಾಮದ ನಿವಾಸಿ 22 ವರ್ಷದ ಮಂಜುಳಾ, ಫೈನಾನ್ಸ್ ಸಂಸ್ಥೆಯ ಕಿರುಕುಳಕ್ಕೆ ಬೇಸತ್ತು ನೇಣಿಗೆ ಕೊರಳೊಡ್ಡಿದ್ದಾರೆ. ಕುಶಾಲನಗರದ ಮೈಕ್ರೋಫೈನಾನ್ಸ್ ಒಂದರಿಂದ ಮಂಜುಳಾ 25 ಸಾವಿರ ರೂ. ಹಣವನ್ನು ಸಾಲವಾಗಿ ಪಡೆದಿದ್ದರು. ಮರು ಪಾವತಿಯನ್ನೂ ಮಾಡಿದ್ದರು. ಆದರೆ ಬಡ್ಡಿ ಕಟ್ಟಿರಲಿಲ್ಲವೆಂದು ಫೈನಾನ್ಸ್​ ನವರು ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಕೊಡಗಿನಲ್ಲಿ ಸಂಭವಿಸಿದ ಜಲಪ್ರವಾಹದಿಂದ ಈಗಾಗಲೇ ನಿರಾಶ್ರಿತರಾದ ಜನರಿಗೆ ಬ್ಯಾಂಕ್ ನವರಾಗಲಿ, ಫೈನಾನ್ಸ್ ಕಂಪನಿಗಳಾಗಲೀ, ಸಹಕಾರಿ ಸಂಘಗಳಾಗಲಿ ಸಾಲ ಮರುಪಾವತಿ ಮಾಡುವಂತೆ ಬಲವಂತ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ. ಆದಾಗ್ಯೂ ಇದಾವುದನ್ನೂ ಲೆಕ್ಕಿಸದ ಮೈಕ್ರೋಫೈನಾನ್ಸ್ ಸಂಘದ ಏಜೆಂಟರು ಮಂಜುಳಾ ಮನೆಗೆ ಬಂದು ಬಡ್ಡಿ ಹಣ ನೀಡುವಂತೆ ಪೀಡಿಸಿದ್ದಾರೆ. ಇದರಿಂದ ಮನನೊಂದ ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಕುಶಾಲನಗರ ಠಾಣೆಯಲ್ಲಿ ಮಂಜುಳಾ ಪತಿ ಸಂತೋಷ್ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...