alex Certify
ಕನ್ನಡ ದುನಿಯಾ       Mobile App
       

Kannada Duniya

ಗೋದಾಮಿನಲ್ಲಿಯೇ ಕೊಳೆಯುತ್ತಿದೆ ನೆರೆ ಸಂತ್ರಸ್ತರಿಗಾಗಿ ಜನರು ನೀಡಿದ ಸಾಮಗ್ರಿಗಳು

ಬಳ್ಳಾರಿ: ಭಾರೀ ಮಳೆ, ಭೀಕರ ಜಲಪ್ರಳಯಕ್ಕೀಡಾಗಿ ಸಂಕಷ್ಟಕ್ಕೀಡಾದ ಕೊಡಗು ಹಾಗೂ ಕೇರಳ ಜನತೆಯ ನೆರವಿಗಾಗಿ ಸಾಕಷ್ಟು ಪ್ರಮಾಣದಲ್ಲಿ ನೆರವಿನ ಹಸ್ತವನ್ನ ಜನರು ಚಾಚಿದ್ದಾರೆ.

ನಿರಾಶ್ರಿತರಿಗಾಗಿ ಆಹಾರ ಸಾಮಗ್ರಿಗಳು, ದವಸ-ಧಾನ್ಯಗಳು, ಬಟ್ಟೆ, ಔಷಧಿಗಳು ಭಾರೀ ಪ್ರಮಾಣದಲ್ಲಿ ಹರಿದುಬಂದಿದೆ. ಆದರೆ ಇದಾವುದೂ ಸಂತ್ರಸ್ತರಿಗೆ ತಲುಪದೇ ಗೋದಾಮಿನಲ್ಲಿ ಕೊಳೆಯುತ್ತಿರುವ ಸಂಗತಿ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

ನೆರೆ ಸಂತ್ರಸ್ತರ ನೆರವಿಗಾಗಿ ಜನರು ತಮ್ಮ ಕೈಲಾದ ಸಹಾಯವನ್ನು ಮಾಡಲು, ಬಳ್ಳಾರಿ ಜಿಲ್ಲಾಡಳಿತಕ್ಕೆ ವಿವಿಧ ರೀತಿಯಲ್ಲಿ ಅಗತ್ಯ ವಸ್ತುಗಳನ್ನು ತಂದು ಕೊಟ್ಟು ಹೋದರೆ, ಜಿಲ್ಲಾಡಳಿತ ಕೊಡಗು ಹಾಗೂ ಕೇರಳಕ್ಕೆ ಕಳುಹಿಸಲು ಲಾರಿಗಳೇ ಸಿಗಲಿಲ್ಲವೆಂದು ಕೈಕಟ್ಟಿಕುಳಿತಿದೆ. ಇದರಿಂದಾಗಿ ಬಳ್ಳಾರಿ ಗೋದಾಮಿನಲ್ಲಿ ಸಂಗ್ರಹವಾದ ವಸ್ತುಗಳು ಕೊಳೆತು ಹೋಗುತ್ತಿವೆ. ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದು ಸಂಗತಿಯೆಂದರೆ ಸಂತ್ರಸ್ತರಿಗಾಗಿ ಜಿಲ್ಲೆಯ ಜನ ಕೂಡಿಸಿಕೊಟ್ಟ 7 ಲಕ್ಷದಷ್ಟು ಪರಿಹಾರ ಹಣ ಕೂಡ ಸಿಎಂ ಪರಿಹಾರ ನಿಧಿಗೆ ತಲುಪಿಸದೇ ನಿರ್ಲಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...