alex Certify
ಕನ್ನಡ ದುನಿಯಾ       Mobile App
       

Kannada Duniya

ದುರಂತದ ನಾಡಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್…!

ದಕ್ಷಿಣದ ಕಾಶ್ಮೀರ, ಭೂಲೋಕದ ಸ್ವರ್ಗ ಎಂದೇ ಪ್ರಸಿದ್ಧವಾಗಿದ್ದ ಕೊಡಗು ಜಿಲ್ಲೆ ಈಗ ವರುಣನ ರೌದ್ರಾವತಾರ, ಪ್ರವಾಹದ ಅಬ್ಬರಕ್ಕೆ ಸಿಲುಕಿ ನಲುಗಿ ಹೋಗಿದೆ. ಅಂದು ಪ್ರಕೃತಿ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಬರುತ್ತಿದ್ದ ಪ್ರವಾಸಿಗರು ಇಂದು ಪ್ರಕೃತಿ ವಿಕೋಪವನ್ನು ಕಂಡು ಕಣ್ಣೀರಿಡುತ್ತಿದ್ದಾರೆ.

ಮಹಾ ಮಳೆಗೆ ಸಿಲುಕಿ ದುರಂತಕ್ಕೀಡಾಗಿರುವ ಕೊಡಗಿನ ಹಲವಾರು ಪ್ರಸಿದ್ಧ ತಾಣಗಳು ಇಂದು ಪ್ರಪಾತಗಳಾಗಿವೆ. ಈ ದುರಂತ ಸ್ಥಳಗಳನ್ನು ನೋಡಲು ಇಂದು ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರ ತಂಡವೇ ಹರಿದುಬರುತ್ತಿದೆ.

ಅಚ್ಚರಿಪಡುವ ರೀತಿಯಲ್ಲಿ ಸಂಪೂರ್ಣ ನೆಲಕಚ್ಚಿರುವ ರಸ್ತೆಗಳು, ಮನೆಗಳು, ಸೇತುವೆಗಳು, ಕುಸಿದು ಬಿದ್ದಿರುವ ಗುಡ್ಡಗಳನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಅಪಾಯಕ್ಕೆ ಆಹ್ವಾನ ನೀಡುವಂತೆ ಬಾಯ್ತೆರೆದು ಕಾಯುತ್ತಿರುವ ಪ್ರಪಾತಗಳ ತುದಿಯಲ್ಲಿ ನಿಂತು ಸೆಲ್ಫಿ ತೆಗೆಯುತ್ತಿದ್ದಾರೆ.

ಜಿಲ್ಲಾಧಿಕಾರಿಯವರ ಎಚ್ಚರಿಕೆಯ ಸೂಚನೆ ಹೊರತಾಗಿಯೂ, ಪೊಲೀಸರ ಕಣ್ಣು ತಪ್ಪಿಸಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರು, ಕೊಚ್ಚಿ ಹೋದ ರಸ್ತೆಗಳ ಮಧ್ಯೆ, ಕುಸಿದು ಬಿದ್ದ ಗಿಡಗಳ ನಡುವೆ, ಮುರಿದು ಬಿದ್ದ ಮನೆಗಳ ಬಳಿ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಕೊಡಗಿನ ದುರಂತ ಸ್ಥಳಗಳು ಈಗ ಪ್ರವಾಸಿಗರಿಗೆ ಟೂರಿಸ್ಟ್ ಜಾಗವಾದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...