alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ನಿರಾಶ್ರಿತರಿಗೆ ಸಂಗ್ರಹಿಸಿದ್ದ ಬಟ್ಟೆಗಳನ್ನು ಬೀದಿಯಲ್ಲಿ ಸುರಿದಿದ್ದ ಅಧಿಕಾರಿಗಳು

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೊಡಗು ಜಿಲ್ಲೆ ತತ್ತರಿಸಿಹೋಗಿದೆ. ಸಂಕಷ್ಟಕ್ಕೊಳಗಾದವರ ನೆರವಿಗೆ ರಾಜ್ಯದ ಜನತೆ ಧಾವಿಸಿದ್ದು, ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಆರ್ಥಿಕ ನೆರವಿನ ಜೊತೆ ನಿರಾಶ್ರಿತರಿಗೆ ಬಟ್ಟೆಗಳನ್ನೂ ನೀಡಿದ್ದಾರೆ.

ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ದಾನಿಗಳಿಂದ ಸಂಗ್ರಹಿಸಿರುವ ಬಟ್ಟೆಗಳು ಬೀದಿ ಪಾಲಾಗಿದ್ದ ಘಟನೆ ಮಡಿಕೇರಿಯ ಇಂದಿರಾನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಈ ಬಟ್ಟೆಗಳನ್ನು ಅಧಿಕಾರಿಗಳು ರಸ್ತೆಯಲ್ಲಿ ಸುರಿದಿದ್ದರೆನ್ನಲಾಗಿದ್ದು, ಇದರ ಮೇಲೆ ನಾಯಿಗಳು ಮಲಗಿದ್ದನ್ನು ಕಂಡ ನಿವಾಸಿಗಳು ಆಕ್ರೋಶಭರಿತರಾಗಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಈ ಬಟ್ಟೆಗಳನ್ನು ಜಿಲ್ಲಾ ಭವನಕ್ಕೆ ಸಾಗಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...