alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಂಜರಸ್ ಜ್ಯೂಸ್ ಕುಡಿಯುವ ಮೊದಲು ಎಚ್ಚರ

juice mm

ಕಲಬುರಗಿ: ಬೇಸಿಗೆ ಬಿಸಿಲಿನ ಬೇಗೆ ತಾಳದೇ, ಜನ ತಂಪು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯ. ಕಬ್ಬಿನ ಹಾಲು, ಎಳನೀರು, ತಂಪು ಪಾನೀಯಗಳು, ಜ್ಯೂಸ್ ಮೊದಲಾದವುಗಳನ್ನು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ.

ಬಳಲಿದ ಜನರಿಗೆ ಜ್ಯೂಸ್ ಕುಡಿಯುವುದಷ್ಟೇ ಮುಖ್ಯವಾಗಿರುವುದರಿಂದ ಕಣ್ಣುಮುಚ್ಚಿಕೊಂಡು ಕುಡಿದು ಬಿಡುತ್ತಾರೆ. ಆದರೆ, ಕೆಲವರು ಜ್ಯೂಸ್ ಗಳಿಗೆ ಉತ್ತಮ ಗುಣಮಟ್ಟದ ಹಣ್ಣನ್ನು ಬಳಸದೇ, ಹಾಳಾದ ಹಣ್ಣುಗಳನ್ನು ಬಳಸಿ, ಅದಕ್ಕೆ ಫ್ಲೇವರ್ ಹಾಕುತ್ತಾರೆ. ಕಲಬುರಗಿಯ ಕೆಲವು ಜ್ಯೂಸ್ ಸೆಂಟರ್ ಗಳಲ್ಲಿ ಇದೇ ರೀತಿ ಆರೋಗ್ಯಕ್ಕೆ ಹಾನಿಕಾರವಾದ ಫ್ಲೇವರ್ ಗಳನ್ನು ಜ್ಯೂಸ್ ಗಳಿಗೆ ಬಳಸಲಾಗುತ್ತಿದೆ. ಇದನ್ನು ಕಂಡ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

ಕಲಬುರಗಿಯ ಕೆಲವು ಜ್ಯೂಸ್ ಸೆಂಟರ್ ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ, ಹಣ್ಣಿನ ಸ್ವಾದವನ್ನು ಹೊಂದಿರುವ, ಅವಧಿ ಮೀರಿದ ರಾಸಾಯನಿಕ ಬಳಸುತ್ತಿರುವುದು ಗೊತ್ತಾಗಿದೆ. ಇವುಗಳನ್ನು ಕುಡಿದರೆ ಮಾರಕ ಕಾಯಿಲೆ ಬರುವುದಂತೂ ಗ್ಯಾರಂಟಿ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...