alex Certify
ಕನ್ನಡ ದುನಿಯಾ       Mobile App
       

Kannada Duniya

ಪುಕ್ಕಟೆ ಅಡುಗೆ ಎಣ್ಣೆ ಸಂಗ್ರಹಿಸಲು ಮುಗಿಬಿದ್ರು ಜನ

ಬಾಗಲಕೋಟೆ: ಅಡುಗೆ ಎಣ್ಣೆ ಲಾರಿ ಹಾಗೂ ಕಂಟೇನರ್ ಲಾರಿ ಪರಸ್ಪರ ಡಿಕ್ಕಿಹೊದ ಪರಿಣಾಮ ಲಾರಿಯಲ್ಲಿದ್ದ ಎಣ್ಣೆ ರಸ್ತೆಗೆ ಹರಿದ ಘಟನೆ ಇಳಕಲ್​-ಹುನಗುಂದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಭವಿಸಿದೆ.

ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಎಣ್ಣೆಯೆಲ್ಲ ರಸ್ತೆ ಪಾಲಾಗಿದ್ದು, ಲಾರಿಯಿಂದ ಅಡುಗೆ ಎಣ್ಣೆ ಸೋರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ಎಣ್ಣೆ ಸಂಗ್ರಹಿಸಲು ಮುಗಿಬಿದ್ದಿದ್ದಾರೆ.

ಅಪಘಾತದಲ್ಲಿ ಲಾರಿಗಳ ನಡುವೆ ಚಾಲಕ ಸಿಲುಕಿಕೊಂದು ಜೀವನ್ಮರಣದ ನಡುವೆ ಹೋರಾಡುತ್ತಿದ್ದರೆ, ಇತ್ತ ಗ್ರಾಮಸ್ಥರು ಆತನನ್ನು ಹೊರ ತೆಗೆಯಲು ಸಹಾಯ ಮಾಡದೇ ಲಾರಿಯಲ್ಲಿದ್ದ ಎಣ್ಣೆ ಸಂಗ್ರಹಿಸುವುದರಲ್ಲಿಯೇ ಮಗ್ನರಾಗಿದ್ದಾರೆ. ಕೊಡ, ಬಕೆಟ್​, ಕ್ಯಾನ್​, ಚೊಂಬು, ಪಾತ್ರೆಗಳನ್ನು ತಂದು ಮನಸೋ ಇಚ್ಛೆ ಎಣ್ಣೆಯನ್ನು ಸಂಗ್ರಹಿಸಿಕೊಂಡು ಹೋಗುತ್ತಿರುವುದು ವಿಪರ್ಯಾಸ.

ಈದೇ ವೇಳೆ ಲಾರಿ ಅಪಘಾತದಿಂದಾಗಿ ಅಡುಗೆ ಎಣ್ಣೆ ರಸ್ತೆಗೆ ಚೆಲ್ಲಿದ್ದರಿಂದ ವೇಗವಾಗಿ ಬಂದ 7 ಬೈಕ್ ಗಳು ಸ್ಕಿಡ್ ಆಗಿ ಅಪಘಾತಕ್ಕೀದಾಗಿವೆ. ಬೈಕ್ ಸ್ಕಿಡ್ ಆದ ಕಾರಣ ನಿಯಂತ್ರಣ ಕಳೆದುಕೊಂಡ ಬೈಕ್​ ಸವಾರರು ಕೆಳಗೆ ಬಿದ್ದಿದ್ದಾರೆ. ಬೈಕ್ ಸವಾರರಿಗೆ ಸಣ್ಣ ಸಣ್ಣಪುಟ್ಟ ಗಾಯಗಳಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...