alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಡೆಯಲ್ಲಿ ಬಲಿಗಾಗಿ ಕಾದು ಕುಳಿತಿದ್ದ ಜವರಾಯ

deathಬೆಂಗಳೂರಿನ ಮಹದೇವಪುರದಲ್ಲಿ ಗೋಡೆ ಬಿದ್ದು ಗುತ್ತಿಗೆದಾರ ಮೃತಪಟ್ಟಿದ್ದಾನೆ. ಐಟಿಪಿಎಲ್ ಮುಖ್ಯರಸ್ಥೆಯಲ್ಲಿರುವ ಭೋರುಕಾ ಸ್ಟೀಲ್ಸ್ ಕಟ್ಟಡದ ನವೀಕರಣ ನಡೆಯುತ್ತಿತ್ತು.

15 ಕಾರ್ಮಿಕರ ಜೊತೆ ಗುತ್ತಿಗೆದಾರ ಅಣ್ಣಾಮಲೈ ಕೆಲಸ ಮಾಡ್ತಾ ಇದ್ರು. ಮೊದಲ ಮಹಡಿಯಲ್ಲಿದ್ದ ಅಣ್ಣಾಮಲೈ ಹ್ಯಾಮರ್ ಸಹಾಯದಿಂದ ಗೋಡೆಯನ್ನು ಕೆಳಕ್ಕಿಳಿಸುತ್ತಿದ್ರು. ಈ ವೇಳೆ ಗೋಡೆ ತುಂಡಾಗಿ ಆತನ ಮೇಲೆ ಬಿದ್ದಿದೆ, ಕಾರ್ಮಿಕರೆಲ್ಲ ಮೇಲಕ್ಕೋಡಿ ಬಂದು ಅವಶೇಷಗಳಡಿಯಿಂದ ಹೊರತೆಗೆಯುವಷ್ಟರಲ್ಲಿ ಅಳಿದುಳಿದ ಗೋಡೆ ಕೂಡ ಮಗುಚಿಕೊಂಡಿದೆ. ತೀವ್ರ ಗಾಯಗಳಿಂದ ಬಳಲಿದ ಅಣ್ಣಾಮಲೈ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದ.

ತಮಿಳುನಾಡಿನ ಧರ್ಮಪುರಿ ಮೂಲದ ಅಣ್ಣಾಮಲೈಗೆ 37 ವರ್ಷ ವಯಸ್ಸಾಗಿತ್ತು. ಕಟ್ಟಡ ನವೀಕರಣಕ್ಕಾಗಿ ಕಾರ್ಮಿಕರಿಗೆ ಸುರಕ್ಷತಾ ವ್ಯವಸ್ಥೆಯನ್ನೇನೋ ಮಾಡಲಾಗಿತ್ತು. ಅಣ್ಣಾಮಲೈ ಕೂಡ ಹೆಲ್ಮೆಟ್ ಧರಿಸಿದ್ದ. ಆದ್ರೆ ಅವಶೇಷಗಳಡಿ ಬಿದ್ದಿದ್ರಿಂದ ಉಸಿರಾಡಲು ಕಷ್ಟವಾಗಿದೆ, ಗೋಡೆ ಬಿದ್ದ ರಭಸಕ್ಕೆ ಆತನ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಭಾರೀ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...