alex Certify
ಕನ್ನಡ ದುನಿಯಾ       Mobile App
       

Kannada Duniya

ಕೈ ಶಾಸಕರ ಪತ್ನಿಗೆ ಕರೆ ಮಾಡಿದ ಬಿ ಎಸ್ ವೈ ಪುತ್ರ

ನೂತನ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಆಮಿಷದ ಆರೋಪ ಕೇಳಿ ಬಂದಿದೆ. ವಿಜಯೇಂದ್ರ ಕಾಂಗ್ರೆಸ್ ಶಾಸಕರ ಪತ್ನಿಗೆ ಕರೆ ಮಾಡಿ ಆಮಿಷವೊಡ್ಡಿದ್ದಾರಂತೆ.

ವಿಜಯೇಂದ್ರ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಪತ್ನಿಗೆ ಕರೆ ಮಾಡಿದ್ದಾರಂತೆ. ಶಿವರಾಮ್ ಹೆಬ್ಬಾರ್ ಪತ್ನಿ ವನಜಾಕ್ಷಿಗೆ ಕರೆ ಮಾಡಿ 15 ಕೋಟಿ ರೂಪಾಯಿ ನೀಡುವ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನ ಬೇಕಾ ಇಲ್ಲ ಹಣ ಬೇಕಾ ಎಂದು ವಿಜಯೇಂದ್ರ ಕೇಳಿದ್ದಾರಂತೆ.

ವಿಜಯೇಂದ್ರ, ಗಾಲಿ ಜನಾರ್ದನರೆಡ್ಡಿ ಮಾದರಿಯಲ್ಲಿಯೇ ಶಾಸಕರನ್ನು ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಬಿ ಎಸ್ ವೈಗೆ ಬೆಂಬಲ ನೀಡಿದ್ರೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರಂತೆ. ನಿನ್ನೆ ಜನಾರ್ದನ ರೆಡ್ಡಿ ಆಡಿಯೋ ಕ್ಲಿಪ್ ಬಹಿರಂಗವಾಗಿತ್ತು. ಉಗ್ರಪ್ಪ, ಜನಾರ್ದನ ರೆಡ್ಡಿ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...