alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಂಸದೆ ರಮ್ಯಾಗೆ ಎಐಸಿಸಿಯಲ್ಲಿ ಸಿಕ್ತು ಪ್ರಮುಖ ಸ್ಥಾನ

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ಕೆಲ ದಿನಗಳ ಹಿಂದೆ ಎಐಸಿಸಿ ಕಾರ್ಯಕಾರಿ ಸಮಿತಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪುನರ್ರಚನೆ ಮಾಡಲಾಗಿತ್ತು.

ಇದೀಗ ಎಐಸಿಸಿ ಪ್ರಚಾರ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರಿಗೆ ಸ್ಥಾನ ನೀಡಲಾಗಿದೆ.

ಪ್ರಚಾರ ಸಮಿತಿಯಲ್ಲಿ ಭಕ್ತ ಚರಣ್ ದಾಸ್, ಪ್ರವೀಣ್ ಚಕ್ರವರ್ತಿ, ಮಿಲಿಂದ್ ದಿಯೋರಾ, ಕುಮಾರ್ ಕೇತ್ಕರ್, ಪವನ್ ಕೇರಾ, ಸತೀಶನ್, ಆನಂದ್ ಶರ್ಮಾ, ಜೈ ವೀರ್, ರಾಜೀವ್ ಶುಕ್ಲಾ, ದಿವ್ಯಾ ಸ್ಪಂದನ, ರಂದೀಪ್ ಸುರ್ಜೆವಾಲಾ, ಮನೀಶ್ ತಿವಾರಿ, ಪ್ರಮೋದ್ ತಿವಾರಿ ಒಳಗೊಂಡಿದ್ದಾರೆ.

ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗಗಳ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರಿಗೆ ಈಗ ಎಐಸಿಸಿಯಲ್ಲಿ ಪ್ರಮುಖ ಸ್ಥಾನ ದೊರೆತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...