alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಗೆ ಶಾಕ್ ! ಶಾಸಕಾಂಗ ಸಭೆಗೆ 12 ಶಾಸಕರ ಗೈರು

ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ಹಿನ್ನಲೆಯಲ್ಲಿ ಅಧಿಕಾರಕ್ಕೇರಲು ಮೂರೂ ಪಕ್ಷಗಳು ತಯಾರಿ ನಡೆಸುತ್ತಿದ್ದು, ಜೆಡಿಎಸ್ ಜೊತೆ ಕಾಂಗ್ರೆಸ್ ಈಗಾಗಲೇ ಕೈ ಜೋಡಿಸಿದ್ದರೆ ಜೆಡಿಎಸ್ ಬೆಂಬಲ ಪಡೆಯಲು ವಿಫಲವಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಮುಂದಾಗಿದೆ.

ಹೀಗಾಗಿ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಹರಸಾಹಸ ನಡೆಸುತ್ತಿದ್ದು, ವಿಶೇಷ ವಿಮಾನದಲ್ಲಿ ಕೇರಳದ ಕೊಚ್ಚಿಯಲ್ಲಿರುವ ರೆಸಾರ್ಟ್ ಗೆ ತಮ್ಮ ಶಾಸಕರನ್ನು ಕರೆದುಕೊಂಡು ಹೋಗಲು ಕಾಂಗ್ರೆಸ್ ತಯಾರಿ ನಡೆಸಿದ್ದರೆ ಜೆಡಿಎಸ್ ಕೂಡಾ ತಮ್ಮ ಪಕ್ಷದ ಶಾಸಕರಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಕಲ್ಪಿಸಲು ಮುಂದಾಗಿದೆ ಎನ್ನಲಾಗಿದೆ.

ಈ ಮಧ್ಯೆ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ 78 ಶಾಸಕರ ಪೈಕಿ 66 ಮಂದಿ ಹಾಜರಾಗಿದ್ದರೆನ್ನಲಾಗಿದ್ದು, 12 ಮಂದಿ ಶಾಸಕರ ಗೈರು ಹಾಜರಿ ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದೆ ಎನ್ನಲಾಗಿದೆ. ಶಾಸಕರುಗಳಾದ ಆನಂದ್ ಸಿಂಗ್, ನಾಗೇಂದ್ರ, ಜಮೀರ್ ಅಹಮ್ಮದ್ ಖಾನ್, ಭೀಮಾ ನಾಯ್ಕ್, ಸತೀಶ್ ಜಾರಕಿಹೊಳಿ, ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ 12 ಮಂದಿ ಗೈರು ಹಾಜರಾಗಿದ್ದರೆನ್ನಲಾಗಿದ್ದು, ಈ ಪೈಕಿ ಕೆಲವರು ತಮ್ಮ ಗೈರು ಹಾಜರಿಯ ಕಾರಣವನ್ನು ಮುಂಚಿತವಾಗಿ ತಿಳಿಸಿದ್ದರೆ ಮತ್ತೆ ಕೆಲವರು ಸಂಪರ್ಕಕ್ಕೂ ಸಿಗದೆ ಶಾಸಕಾಂಗ ಸಭೆಗೆ ಕೈ ಕೊಟ್ಟಿರುವುದು ಚಿಂತೆಗೀಡು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...