alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಗೆ ಮತ್ತೊಂದು ಶಾಕ್! ಈಗಲ್ಟನ್ ರೆಸಾರ್ಟ್ ನಿಂದ ಹೊರ ಬಂದ ಶಾಸಕ

ಬಿಜೆಪಿಯ ‘ಆಪರೇಷನ್ ಕಮಲ’ದಿಂದ ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಹರಸಾಹಸ ನಡೆಸುತ್ತಿರುವ ಕಾಂಗ್ರೆಸ್ ನಾಯಕರು, ಫಲಿತಾಂಶ ಪ್ರಕಟಗೊಂಡ ಬಳಿಕ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ‘ಕೈ’ಗೆ ಸಿಗದಿರುವುದರಿಂದ ತಲೆಕೆಡಿಸಿಕೊಂಡಿರುವ ಮಧ್ಯೆ ಈಗಲ್ಟನ್ ರೆಸಾರ್ಟ್ ನಲ್ಲಿದ್ದ ಮತ್ತೊಬ್ಬ ಶಾಸಕರು ಈಗ ರೆಸಾರ್ಟ್ ನಿಂದ ಹೊರ ಬಂದಿದ್ದಾರೆನ್ನಲಾಗಿದೆ.

ಹುಮ್ನಾಬಾದ್ ಕ್ಷೇತ್ರದ ಶಾಸಕ ರಾಜಶೇಖರ್ ಪಾಟೀಲ್, ಅನಾರೋಗ್ಯದ ಕಾರಣ ಹೇಳಿ ರೆಸಾರ್ಟ್ ನಿಂದ ಹೊರ ಬಂದಿದ್ದಾರೆಂದು ಹೇಳಲಾಗಿದ್ದು, ಈ ಸಂದರ್ಭದಲ್ಲಿ ಈಗಲ್ಟನ್ ರೆಸಾರ್ಟ್ ನ ಗೇಟ್ ಬಳಿ ಹೈಡ್ರಾಮಾವೇ ನಡೆದಿದೆ.

ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗೆ ಹೋಗಿ ಬರುವುದಾಗಿ ಶಾಸಕರುಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರ ಬಳಿ ಹೇಳಿದ ರಾಜಶೇಖರ್ ಪಾಟೀಲ್, ಗೇಟ್ ಬಳಿ ಬಂದಾಗ ಅಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ.

ಎಷ್ಟು ಹೇಳಿದರೂ ರಾಜಶೇಖರ್ ಪಾಟೀಲರನ್ನು ಹೊರ ಕಳುಹಿಸಲಿಲ್ಲವೆನ್ನಲಾಗಿದ್ದು, ಆಗ ರಾಜಶೇಖರ್ ಪಾಟೀಲ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಗೇಟ್ ಬಳಿ ಧಾವಿಸಿ ಬಂದ ಮಾಜಿ ಸಚಿವರುಗಳಾದ ಕೆ.ಜೆ. ಜಾರ್ಜ್ ಹಾಗೂ ಪ್ರಿಯಾಂಕ್ ಖರ್ಗೆ ಪೊಲೀಸರಿಗೆ ಹೇಳಿ ರಾಜಶೇಖರ್ ಪಾಟೀಲರನ್ನು ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ. 2 ಗಂಟೆಯೊಳಗಾಗಿ ವಾಪಾಸ್ ಬರುವುದಾಗಿ ರಾಜಶೇಖರ್ ಪಾಟೀಲ್ ತಿಳಿಸಿದ್ದರಾದರೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಬಿಜೆಪಿಯ ‘ಆಪರೇಷನ್ ಕಮಲ’ದ ಪಟ್ಟಿಯಲ್ಲಿ ಅವರ ಹೆಸರಿರುವುದು ಗಮನಾರ್ಹ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...