alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಏನೆಲ್ಲಾ ವಿಶೇಷವಿದೆ ಗೊತ್ತಾ…?

ಅಳೆದು, ತೂಗಿ 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದ್ದಾರೆ.

ನಾಯಕರ ಮಕ್ಕಳಿಗೆ ಟಿಕೆಟ್ ನೀಡಿರುವ ಹೈಕಮಾಂಡ್, 12 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. 15 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಇತ್ತೀಚೆಗೆ ನಿಧನರಾದ ಬೇಲೂರು ಶಾಸಕ ರುದ್ರೇಶ್ ಗೌಡ ಅವರ ಪತ್ನಿ ಕೀರ್ತನಾ ಅವರಿಗೆ, ಕಲಬುರಗಿ ಉತ್ತರದಿಂದ ಖಮರುಲ್ ಇಸ್ಲಾಂ ಪತ್ನಿ ಕೆ. ಫಾತೀಮಾ ಅವರಿಗೆ ಟಿಕೆಟ್ ನೀಡಲಾಗಿದೆ.

ಈ ಬಾರಿ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರಿಗೆ ಸಾಗರದಿಂದ, ಶಾಮನೂರು ಶಿವಶಂಕರಪ್ಪ ಅವರಿಗೆ ದಾವಣಗೆರೆ ಉತ್ತರದಿಂದ, ಕೆ.ಬಿ. ಕೋಳಿವಾಡ ಅವರಿಗೆ ರಾಣೆಬೆನ್ನೂರು ಕ್ಷೇತ್ರದಿಂದ ಡಾ. ಎ.ಬಿ. ಮಾಲಕರೆಡ್ಡಿ ಅವರಿಗೆ ಯಾದಗಿರಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

15 ಮಂದಿ ಅಲ್ಪ ಸಂಖ್ಯಾತರು, 40 ಮಂದಿ ಲಿಂಗಾಯತರು, 23 ಒಕ್ಕಲಿಗರು, 50 ಮಂದಿ ಹಿಂದುಳಿದ ವರ್ಗದವರು, 15 ಮುಸ್ಲಿಮರು, 5 ಮಂದಿ ಬ್ರಾಹ್ಮಣರು, ಇತರೆ ವರ್ಗದವರಿಗೆ ಟಿಕೆಟ್ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...