alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರಕ್ಕಾಗಿ ಅಮರಣಾಂತ ಉಪವಾಸಕ್ಕೆ ಸಿದ್ಧತೆ

ರಾಜ್ಯ ರಾಜಕಾರಣದ ಕಿತ್ತಾಟ ಅತಿರೇಕಕ್ಕೆ ಹೋಗ್ತಿದೆ. ಅಧಿಕಾರಕ್ಕಾಗಿ ರಾಜಕಾರಣಿಗಳು ಏನೆಲ್ಲ ಮಾಡಬಹುದು ಎಂಬುದನ್ನು ಕರ್ನಾಟಕ ರಾಜಕಾರಣಿಗಳು ತೋರಿಸಿಕೊಡ್ತಿದ್ದಾರೆ. ಒಂದು ಕಡೆ ರೆಸಾರ್ಟ್ ರಾಜಕಾರಣ, ಇನ್ನೊಂದೆಡೆ ಆಪರೇಷನ್ ಕಮಲವಾದ್ರೆ ಮತ್ತೊಂದೆಡೆ ರಾಜ್ಯಪಾಲರಿಗೆ ಒತ್ತಡ ಹೇರಿಕೆ ತಂತ್ರ ನಡೆಯುತ್ತಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಗೆ 6 ಮಂದಿ ಶಾಸಕರು ಗೈರಾಗಿದ್ದಾರೆ. ಆದ್ರೆ ಈ ಎಲ್ಲ ಶಾಸಕರ ಬೆಂಬಲ ನಮಗಿದೆ ಎಂದಿರುವ ಕಾಂಗ್ರೆಸ್ ಎಲ್ಲ ಶಾಸಕರ ಸಹಿ ಸಂಗ್ರಹ ಮಾಡಿದೆ. ಇದನ್ನು ರಾಜ್ಯಪಾಲರ ಮುಂದಿಡಲು ಮುಂದಾಗಿದೆ. ಸಂಜೆ 4 ಗಂಟೆ ಸುಮಾರಿಗೆ ಕಾಂಗ್ರೆಸ್-ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಎಲ್ಲ ಶಾಸಕರು ರಾಜ್ಯಪಾಲರ ಮುಂದೆ ಪರೇಡ್ ಮಾಡಲಿದ್ದಾರೆ ಎನ್ನಲಾಗ್ತಿದೆ.

ಒಂದು ವೇಳೆ ಸಂಜೆಯೊಳಗೆ ಕಾಂಗ್ರೆಸ್-ಜೆಡಿಎಸ್ ಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡದೆ ಹೋದಲ್ಲಿ ನಾಯಕರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ. ರಾಜಭವನದ ಮುಂದೆಯೇ ನಾಯಕರು ಅಮರಣಾಂತ ಉಪವಾಸ ಕೈಗೊಳ್ಳಲಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...