alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ದಿಗ್ಗಜರನ್ನು ಸಚಿವ ಸ್ಥಾನದಿಂದ ದೂರವಿಟ್ಟಿತಾ ಕೈ-ತೆನೆ ಮೈತ್ರಿ…?!!

ರಾಜ್ಯ ರಾಜಕೀಯ ಚದುರಂಗದಲ್ಲಿ ದಿನಕ್ಕೊಂದು ಬದಲಾವಣೆ, ಕ್ಷಣಕ್ಕೊಂದು ಚರ್ಚೆ ನಡೆಯುತ್ತಲೇ ಇವೆ. ಅಂದ ಹಾಗೆ ಘಟಾನುಘಟಿ ರಾಜಕೀಯ ನಾಯರನ್ನು ಮಂತ್ರಿಗಿರಿಯಿಂದ ಕಾಂಗ್ರೆಸ್-ಜೆಡಿಎಸ್ ದೂರವಿಡುತ್ತಿರೋದು ಏಕೆ..? ಇದರ ಹಿಂದಿರೋ ರಹಸ್ಯವೇನು…? ಹೆಚ್ಚಿನ ಮಾಹಿತಿಗಾಗಿ ಓದಿ.

ಸಮ್ಮಿಶ್ರದಲ್ಲಿ ಬೂದಿ ಮುಚ್ಚಿದ ಕೆಂಡ…!

ಒಂದೆಡೆ ಮೈತ್ರಿ ಸರ್ಕಾರದ ಮೊದಲ ಪಟ್ಟಿಯಲ್ಲಿರುವವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಮೈತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಅಂದ ಹಾಗೆ ಈ ಬಾರಿ ಎರಡೂ ಪಕ್ಷಗಳ ಹಿರಿಯರನ್ನು ಮಂತ್ರಿ ಸ್ಥಾನದಿಂದ ದೂರ ಇಡಲಾಗಿದೆ. ಹೊಸಬರಿಗೆ ಹಾಗೂ ಅವಕಾಶ ಸಿಕ್ಕದೇ ಇರುವವರಿಗೆ ಮಂತ್ರಿ ಪಟ್ಟ ನೀಡಲಾಗಿದೆ. ಕಾಂಗ್ರೆಸ್ ಪಟ್ಟಿಯನ್ನು ಪರಿಷ್ಕರಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೆರವು ಪಡೆದಿದ್ದರೆ, ಮತ್ತೊಂದೆಡೆ ಜೆಡಿಎಸ್​ನ ಪಟ್ಟಿ ಅಂತಿಮಗೊಳಿಸಲು ರಾಜಕೀಯ ಭೀಷ್ಮ ಹೆಚ್.ಡಿ. ದೇವೇಗೌಡ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.

ಇಂದು ನಡೆದ ನೂತನ ಸಚಿವರ ಪದಗ್ರಹಣ….

ಇಂದು ಮಧ್ಯಾಹ್ನ 2 ಗಂಟೆಗೆ ಮೈತ್ರಿ ಸರ್ಕಾರದ ನೂತನ ಸಚಿವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣವಚನ ಸ್ವೀಕರಿಸಿದ್ದಾರೆ. ಏತನ್ಮಧ್ಯೆ, ಮಾಜಿ ಸಚಿವ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಹಿರಿಯ ನಾಯಕರಲ್ಲಿ ಅಸಮಾಧಾನ ಮನೆ ಮಾಡಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಈ ಮೈತ್ರಿಯಲ್ಲಿ ಮುಂದಿನ ದಿನಗಳಲ್ಲಿ ಮೈತ್ರಿ ಉಳಿಯುತ್ತಾ… ಉರುಳುತ್ತಾ.. ಬಲ್ಲವರ್ಯಾರು…!!!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...