alex Certify
ಕನ್ನಡ ದುನಿಯಾ       Mobile App
       

Kannada Duniya

ತಾನೇ ತೋಡಿದ ಹಳ್ಳಕ್ಕೆ ಬೀಳುತ್ತಾ ಬಿಜೆಪಿ…?

ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಅಧಿಕಾರ ಸಿಗದೆ, ಬಿಜೆಪಿ ಒದ್ದಾಟ ನಡೆಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆಯಲು ಕಮಲ ಪಾಳೆಯ ಪ್ಲಾನ್ ಮಾಡಿಕೊಂಡಿರೋದು ಗೊತ್ತಿರೋ ಸಂಗತಿ. ಆದ್ರೆ, ತಾನೇ ತೋಡಿದ ಹಳ್ಳಕ್ಕೆ ಬಿಜೆಪಿಯನ್ನು ಕೆಡವಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಯೋಜನೆಯನ್ನು ರೂಪಿಸಿಕೊಂಡಿವೆ ಎನ್ನಲಾಗ್ತಿದೆ.

ಹೇಗಾದ್ರೂ ಮಾಡಿ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿ, ಅಧಿಕಾರದ ಗದ್ದುಗೆ ಏರಲು ಕಮಲ ಪಾಳೆಯ ಕಸರತ್ತು ನಡೆಸಿದೆ. ಕೇಸರಿ ನಾಯಕರ ನಡೆಯನ್ನು ಅರಿತು ಕೈ ಹಾಗೂ ದಳ, ಬಿಜೆಪಿ ಶಾಸಕರನ್ನೇ ತಮ್ಮತ್ತ ಸೆಳೆಯಲು ರಣ ತಂತ್ರ ರೂಪಿಸುತ್ತಿವೆ ಎನ್ನಲಾಗಿದೆ. ಒಂದು ವೇಳೆ ಉಭಯ ಪಕ್ಷಗಳು ಹಾಕಿಕೊಂಡ ನೀಲಿ ನಕ್ಷೆ ಕ್ಲಿಕ್ ಆದ್ರೆ, ಖುದ್ದು ಸಿಎಂ ಕುಮಾರಸ್ವಾಮಿ ಹಾಗೂ ಕೈ ನಾಯಕ ಡಿ.ಕೆ.ಶಿ. ಮೈದಾನಕ್ಕೆ ಎಂಟ್ರಿ ನೀಡ್ತಾರೆ. ಆಪರೇಷನ್ ತೆನೆ-ಹಸ್ತ ನಡೆಸಲು ಉಭಯ ಪಕ್ಷದ ವರಿಷ್ಠರಿಂದ ಹಸಿರು ನಿಶಾನೆ ಸಿಕ್ರೆ, ರಾಜಕೀಯ ಚದುರಂಗದಾಟ ಎಲ್ಲರ ಗಮನ ಸೆಳೆಯಲಿದೆ.

ಲೋಕಸಭಾ ಚುನಾವಣೆಯ ವೇಳೆಗೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೇರಲು ಅಥವಾ ಇದು ಸಾಧ್ಯವಾಗದಿದ್ದರೆ ಚುನಾವಣೆಯ ಮೈದಾನಕ್ಕೆ ಎಂಟ್ರಿ ನೀಡಲು ಬಿಜೆಪಿ ಕನಸು ಕಾಣುತ್ತಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಂದ ಬಿಜೆಪಿ ಶಾಸಕರನ್ನು ಸೆಳೆಯುವ ಸಿದ್ಧತೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...