alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರ್ಗ ಮಧ್ಯೆ ಪ್ಲಾನ್ ಬದಲಾಯಿಸಿದ ‘ಕೈ’ ನಾಯಕರು

ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ನಾಯಕರು ಸೆಳೆಯಬಾರದೆಂಬ ಕಾರಣಕ್ಕೆ ಹೈದರಾಬಾದ್ ಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದ ಕಾಂಗ್ರೆಸ್ ನಾಯಕರು, ಇಂದು ವಿಶ್ವಾಸಮತ ಯಾಚನೆ ನಡೆಯಲಿರುವ ಹಿನ್ನಲೆಯಲ್ಲಿ ವಾಪಾಸ್ ಕರೆದುಕೊಂಡು ಬಂದಿದ್ದಾರೆ.

ಶಾಸಕರುಗಳಿದ್ದ ಬಸ್ ಬೆಂಗಳೂರು ಪ್ರವೇಶಿಸಿದ್ದು, ಈ ಮೊದಲು ದೇವನಹಳ್ಳಿ ಬಳಿಯ ರೆಸಾರ್ಟ್ ನಲ್ಲಿ ಕೆಲ ಹೊತ್ತು ತಂಗಲು ಚಿಂತನೆ ನಡೆಸಿದ್ದ ಕಾಂಗ್ರೆಸ್ ನಾಯಕರು, ಮಾರ್ಗ ಮಧ್ಯೆ ಪ್ಲಾನ್ ಬದಲಾಯಿಸಿದ್ದಾರೆ.

ಮಾಜಿ ಸಚಿವ ಕೆ.ಜೆ. ಜಾರ್ಜ್, ರೆಸಾರ್ಟ್ ಬೇಡ. ತಮ್ಮ ಒಡೆತನದ ಎಂಬೆಸಿ ಪಾರ್ಕ್ ಹೋಟೆಲ್ ಗೆ ಆಗಮಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಶಾಸಕರುಗಳು ಈಗ ಎಂಬೆಸಿ ಪಾರ್ಕ್ ಹೋಟೆಲ್ ಗೆ ಆಗಮಿಸಿದ್ದು, ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ 11 ಗಂಟೆ ಸುಮಾರಿಗೆ ವಿಧಾನಸೌಧಕ್ಕೆ ಒಟ್ಟಿಗೆ ತೆರಳಲಿದ್ದಾರೆ.

ಈ ಮಧ್ಯೆ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿರುವ ಜೆಡಿಎಸ್ ಶಾಸಕರು, ಲಿ ಮೆರಿಡಿಯನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರುಗಳಿಗಾಗಿ 30 ರೂಮ್ ಗಳನ್ನು ಬುಕ್ ಮಾಡಲಾಗಿದೆ ಎನ್ನಲಾಗಿದ್ದು, ವಿಧಾನಸೌಧಕ್ಕೆ ತೆರಳಲು ಬಸ್ ಸಹ ಸಿದ್ದವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...