alex Certify
ಕನ್ನಡ ದುನಿಯಾ       Mobile App
       

Kannada Duniya

ಅಚಾನಕ್ ಸಿದ್ಧವಾಯ್ತು ಆಡಿಯೋ ರೆಕಾರ್ಡ್ ಪ್ಲಾನ್: ಕೈನಿಂದಲೇ ವ್ಯಕ್ತವಾಗ್ತಿದೆ ವಿರೋಧ

ಸಿಎಂ ಆಗಿ ಅಧಿಕಾರ ವಹಿಸಿಕೊಂಡ 55 ಗಂಟೆಯಲ್ಲಿಯೇ ಅಧಿಕಾರದಿಂದ ಯಡಿಯೂರಪ್ಪ ಕೆಳಗಿಳಿದಿದ್ದಾರೆ. ವಿಶ್ವಾಸಮತ ಯಾಚನೆಗೂ ಮುನ್ನವೇ ಯಡಿಯೂರಪ್ಪ ವಿದಾಯದ ಭಾಷಣ ಮಾಡಿ ರಾಜೀನಾಮೆ ನೀಡಿದ್ರು. ಬಿಜೆಪಿಯ ‘ಆಪರೇಷನ್ ಕಮಲ’ಕ್ಕೆ ಅಡ್ಡಿಯಾಗಿದ್ದು ಕಾಲ್ ರೆಕಾರ್ಡ್.

ಕಾಂಗ್ರೆಸ್, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಆಡಿಯೋ ರೆಕಾರ್ಡ್ ಮಾರ್ಗವನ್ನು ಅನುಸರಿಸ್ತು. ಅದ್ರಲ್ಲಿ ಸುಲಭವಾಗಿ ಯಶಸ್ವಿಯಾಯ್ತು. ಬಹುಮತ ಸಾಬೀತಿಗೂ ಮುನ್ನ ಕಾಂಗ್ರೆಸ್ ಬಿಜೆಪಿಯ 6 ಆಡಿಯೋ ಕ್ಲಿಪ್ ಗಳನ್ನು ಬಹಿರಂಗಪಡಿಸಿತ್ತು.

ಬಿಜೆಪಿ ಹಿರಿಯ ಹಾಗೂ ಕಿರಿಯ ನಾಯಕರು ನೇರವಾಗಿ ಶಾಸಕರ ಜೊತೆ ಮಾತನಾಡ್ತಾರೆ ಎಂಬುದು ಮಧ್ಯವರ್ತಿಯಿಂದ ಕಾಂಗ್ರೆಸ್ ನಾಯಕರ ಕಿವಿಗೆ ಬಿದ್ದಿತ್ತು. ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂಬ ಸತ್ಯವನ್ನು ಜನರ ಮುಂದಿಡೋದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿದ ನಾಯಕರು ಆಡಿಯೋ ರೆಕಾರ್ಡ್ ಪ್ಲಾನ್ ಗಿಳಿದ್ರು.

ಬಿ.ಸಿ. ಪಾಟೀಲ್ ಸೇರಿದಂತೆ ಕಾಂಗ್ರೆಸ್ ಶಾಸಕರ ಪತ್ನಿಯರಿಗೆ ಬಿಜೆಪಿ ನಾಯಕರು ಕರೆ ಮಾಡಿದ ಆಡಿಯೋಗಳನ್ನು ರೆಕಾರ್ಡ್ ಮಾಡಿದ್ದರು. ನಂತ್ರ ಒಂದಾದ ಮೇಲೆ ಒಂದನ್ನು ಬಿಡುಗಡೆ ಮಾಡಿದ್ರು. ಇದು ಯಡಿಯೂರಪ್ಪ ಅಧಿಕಾರಕ್ಕಿಳಿಯಲು ಕಾರಣವಾಗಿತ್ತು. ಆಡಿಯೋ ಬಿಡುಗಡೆ ಮಾಡಿದ್ದನ್ನು ಆಗ್ಲೇ ಕಾಂಗ್ರೆಸ್ ನ ಕೆಲ ನಾಯಕರು ವಿರೋಧಿಸಿದ್ದರು.

ಈಗ ಇದು ನಕಲಿ ಆಡಿಯೋ ಎಂದು ಹೇಳಲಾಗ್ತಿದೆ. ಕೆಲ ಕಾಂಗ್ರೆಸ್ ನಾಯಕರೇ ಇದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಗೆ ಮುಜುಗರವನ್ನುಂಟು ಮಾಡಲು ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂಬ ರೀತಿಯಲ್ಲಿ  ಕಾಂಗ್ರೆಸ್ ನಾಯಕ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...