alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವ ಸ್ಥಾನಾಕಾಂಕ್ಷಿಗಳಿಗೆ ‘ಬಿಗ್ ಶಾಕ್’, ಲೋಕಸಭಾ ಚುನಾವಣೆವರೆಗೂ ಇಲ್ಲ ವಿಸ್ತರಣೆ

ಜಾರಕಿಹೊಳಿ ಸಹೋದರರು ಮತ್ತವರ ಬೆಂಬಲಿಗ ಶಾಸಕರ ರಾಜಕೀಯ ನಡೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಪತನದ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನಾಕಾಂಕ್ಷಿ ಶಾಸಕರುಗಳಿಗೆ ಶಾಕ್ ನೀಡಿದೆ.

ಖಾಲಿ ಇರುವ ಸಚಿವ ಸ್ಥಾನಗಳಿಗೆ 20 ಕ್ಕೂ ಅಧಿಕ ಮಂದಿ ಶಾಸಕರುಗಳು ಆಕಾಂಕ್ಷಿಗಳಾಗಿರುವ ಕಾರಣ ಈ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಿಸಿದರೆ ಮತ್ತಷ್ಟು ಶಾಸಕರು ಬಂಡಾಯ ಏಳಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್, ಲೋಕಸಭಾ ಚುನಾವಣೆಯವರೆಗೂ ಸಚಿವ ಸಂಪುಟ ವಿಸ್ತರಿಸದಿರಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ನಿಗಮ-ಮಂಡಳಿಗಳಿಗೂ ನೇಮಕ ಸದ್ಯಕ್ಕಿಲ್ಲವೆಂಬ ಮಾತುಗಳು ಕೇಳಿ ಬರುತ್ತಿದ್ದು, ಸಚಿವ ಸ್ಥಾನ ಅಥವಾ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಶಾಸಕರುಗಳಿಗೆ ಪಕ್ಷದ ಹೈಕಮಾಂಡ್ ನ ಈ ತೀರ್ಮಾನದಿಂದ ಭಾರಿ ನಿರಾಸೆಯಾಗಿದೆ. ಮುಂದಿನ ದಿನಗಳಲ್ಲಿ ಈ ಅಸಮಾಧಾನ ಯಾವ ತಿರುವು ಪಡೆಯುತ್ತದೆಂಬುದನ್ನು ಕಾದುನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...