alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಬರಹ ನೋಡಿಕೊಂಡೇ ಪಾಠ ಕೇಳುವ ವಿದ್ಯಾರ್ಥಿಗಳು

ppp

ಬಳ್ಳಾರಿ: ಸಾರ್ವಜನಿಕ ಶೌಚಾಲಯಗಳಿಗೆ ಕೆಲವು ಕಡೆಗಳಲ್ಲಿ ಕಾಲಿಡುವಂತೆ ಇರಲ್ಲ. ಕಾಲಿಟ್ಟ ಕೂಡಲೇ ಗೋಡೆಗಳ ಮೇಲೆ ಅಶ್ಲೀಲ ಚಿತ್ರಗಳು ಹಾಗೂ ಬರಹಗಳನ್ನು ಕಾಣಬಹುದಾಗಿದೆ.

ಬಳ್ಳಾರಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇದೇ ರೀತಿ ಅಶ್ಲೀಲ ಬರಹಗಳು ಕಂಡು ಬಂದಿವೆ. ಕಾಲೇಜಿನ ಕೊಠಡಿಗಳ ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆಯಲಾಗಿದ್ದು, ಪೋಷಕರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಗೋಡೆಗಳ ಮೇಲೆ ಅಶ್ಲೀಲವಾಗಿ ಬರಹಗಳು ದೊಡ್ಡ ಗಾತ್ರದಲ್ಲಿದ್ದರೂ, ಕಾಲೇಜಿನ ಆಡಳಿತ ಮಂಡಳಿ ಕಂಡು ಕಾಣದಂತೆ ಕುಳಿತಿದೆ. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಜೊತೆಯಾಗಿಯೇ ಕಲಿಯುತ್ತಿರುವ ಕಾಲೇಜಿನಲ್ಲಿ ಕಿಡಿಗೇಡಿಗಳು ಇಂತಹ ಕೆಲಸ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...