alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಇದ್ರೆ ಮಾತ್ರ ಕಾಲೇಜಿಗೆ ಪ್ರವೇಶ..!

noti

ಬೆಂಗಳೂರು: ‘ಬಾಯ್ ಫ್ರೆಂಡ್ ಇದ್ದರೆ ಮಾತ್ರ, ಕಾಲೇಜಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿನಿಯರು ಬಾಯ್ ಫ್ರೆಂಡ್ ಹೊಂದಿರಲೇಬೇಕು’.

ಹೀಗೊಂದು ನೋಟಿಸ್ ಅನ್ನು ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗಿದ್ದು, ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ.

ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರ ನಕಲಿ ಸಹಿ ಬಳಸಿ, ನೋಟಿಸ್ ಸಿದ್ಧಪಡಿಸಲಾಗಿದೆ.

ಫೆಬ್ರವರಿ 14 ರೊಳಗೆ ಎಲ್ಲಾ ವಿದ್ಯಾರ್ಥಿನಿಯರು ಕನಿಷ್ಟ ಒಬ್ಬರು ಬಾಯ್ ಫ್ರೆಂಡ್ ಹೊಂದಿರಬೇಕು. ಇಲ್ಲದಿದ್ದರೆ, ಕಾಲೇಜಿಗೆ ಪ್ರವೇಶ ನೀಡುವುದಿಲ್ಲ ಎಂದು ಹೇಳಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ನಡುವೆ ಈ ವಿಚಾರ ಭಾರೀ ಚರ್ಚೆಗೆ ಒಳಗಾಗಿದ್ದು, ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ಸ್ಪ್ರೆಡ್ ಲವ್ ಹೆಸರಲ್ಲಿ ಈ ನೋಟಿಸ್ ಬರೆಯಲಾಗಿದ್ದು, ಕಾಲೇಜಿನ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...