alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧಾನಸೌಧ ಸಿಬ್ಬಂದಿಗೆ ನಡುಕ ಹುಟ್ಟಿಸಿದ ಸರ್ಪ

cobra

ಬೆಳಗ್ಗೆ ಕರ್ತವ್ಯಕ್ಕೆ ಅಂತಾ ಬೆಂಗಳೂರಿನ ವಿಧಾನಸೌಧಕ್ಕೆ ಬಂದವರಿಗೆಲ್ಲ ಶಾಕ್ ಕಾದಿತ್ತು. 3 ಅಡಿ ಉದ್ದದ ಸರ್ಪವೊಂದು ವಿಧಾನಸೌಧದ ಆವರಣದಲ್ಲಿರುವ ಲಾನ್ ನಲ್ಲಿ ಹಾಯಾಗಿ ಮಲಗಿತ್ತು. ಸುಮಾರು 45 ನಿಮಿಷಗಳವರೆಗೂ ಸರ್ಪ ಅಲ್ಲಿಂದ ಕದಲಲೇ ಇಲ್ಲ, ವಿಧಾನಸೌಧ ಸಿಬ್ಬಂದಿಗೆ ಆತಂಕ.

ಆ ನಾಗರಹಾವು ಇಲಿಯ ಬಿಲ ಸೇರಿಕೊಳ್ಳುವವರೆಗೂ ಗಾಬರಿಯಿಂದ ಸಿಬ್ಬಂದಿಯೆಲ್ಲ ಅಲ್ಲೇ ನಿಂತಿದ್ದರು. ಬೆಳಗ್ಗೆ ಸುಮಾರು 10.30ರ ವೇಳೆಗೆ ನಾಗರಹಾವು ವಿಧಾನಸೌಧ ಕೆಲಸಗಾರರ ಕಣ್ಣಿಗೆ ಬಿದ್ದಿದೆ. ಹಾವನ್ನು ಓಡಿಸಲು ಸ್ಥಳಕ್ಕೆ ಪೊಲೀಸ್ ಪೇದೆಗಳನ್ನು ಕೂಡ ಕರೆಸಲಾಯ್ತು.

ಅವರಿಂದ ಸಾಧ್ಯವಾಗದೇ ಇದ್ದಾಗ ಹಾವು ಹಿಡಿಯುವವರು ಕೂಡ ಸ್ಥಳಕ್ಕೆ ಬಂದ್ರು. ಹಾವನ್ನು ಹಿಡಿಯಲು ಅವರು ಕಸರತ್ತು ಶುರುಮಾಡ್ತಿದ್ದಂತೆ ಸರ್ಪ ಇಲಿಯ ಬಿಲ ಸೇರಿಕೊಂಡು ಅಲ್ಲಿಂದ ಮಾಯವಾಯ್ತು. ಈ ಹಿಂದೆಯೂ ಕೂಡ ಇಂಥದ್ದೇ ಘಟನೆ ನಡೆದಿತ್ತು. ಪಕ್ಕದಲ್ಲೇ ದೇವಾಲಯವಿದ್ದು, ಸರ್ಪ ಕಾಣಿಸಿಕೊಂಡಿರುವುದಕ್ಕೆ ಬೇರೆ ಕಾರಣವೇ ಇದೆ ಅಂತಾ ಕೆಲವರು ವಿಶ್ಲೇಷಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...