alex Certify
ಕನ್ನಡ ದುನಿಯಾ       Mobile App
       

Kannada Duniya

ಮತಗಟ್ಟೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ರು ಜನ

ಮೇ 12 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಿತು. ನಾಗರಿಕರು ಉತ್ಸಕತೆಯಿಂದ ತಮ್ಮ ಹಕ್ಕು ಚಲಾಯಿಸಿದ್ರು. ಆದ್ರೆ ಅಂದು ಬೆಂಗಳೂರಿನ ಮಹದೇವಪುರ ಮತಗಟ್ಟೆಯಲ್ಲಿ ವಿಶೇಷ ಅತಿಥಿಯ ಆಗಮನದಿಂದ ಮತದಾನ 20 ನಿಮಿಷ ತಡವಾಗಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.

ಮಹದೇವಪುರ ಮತಗಟ್ಟೆಗೆ ಅಂದು ಬಂದ ಅತಿಥಿ ಯಾರು ಗೊತ್ತಾ…? ಬರೋಬ್ಬರಿ 3 ಅಡಿ ಉದ್ದದ ಕಾಳಿಂಗ ಸರ್ಪ. ಮತದಾನ ಮಾಡಲು ಬಂದ ಜನರು ಹಾವನ್ನು ನೋಡಿ ಗಾಬರಿಗೊಂಡ್ರು. ತಕ್ಷಣವೇ ಹಾವು ಹಿಡಿಯುವರಿಗೆ ವಿಷಯ ತಿಳಿಸಲಾಯ್ತು. ಅವರು ಬರುವುದು ತಡವಾಗಿದ್ರಿಂದ 20 ನಿಮಿಷ ಮತದಾನವನ್ನು ಸ್ಥಗಿತಗೊಳಿಸಬೇಕಾಯ್ತು.

ಜನರು ಒಟ್ಟುಗೂಡಿದಂತೆ ಗಾಬರಿಗೊಂಡ ಹಾವು, ಅಲ್ಲಿಯೇ ಇದ್ದ ಬಾಗಿಲಿನ ಮೇಲೆ ಏರಲು ಆರಂಭಿಸಿತು. ತಕ್ಷಣವೇ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಕಬ್ಬಿಣದ ರಾಡ್ ನಿಂದ ಹಾವನ್ನು ಕೆಳಗೆಳೆದ್ರು. ಕಳಗೆ ಇಳಿದ ಹಾವು ಸರಸರನೆ ಹೊರಗಡೆ ಹೋಯ್ತು. ಬಳಿಕ ಮತದಾನ ಆರಂಭವಾಯ್ತು. ಹಾವು ಹೋದ ಮೇಲೆ ನೆಮ್ಮದಿಯ ನಿಟ್ಟುಸಿರುಬಿಟ್ಟ ಮತದಾರರು ತಮ್ಮ ಹಕ್ಕು ಚಲಾಯಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...